ಬೆಂಗಳೂರು ಬ್ಯಾರಿ ಜಮಾಅತ್ ಅಧ್ಯಕ್ಷರಾಗಿ ಸವಾದ್ ಮುಹಮ್ಮದ್ ಕುಂಞಿ ಆಯ್ಕೆ

ಸವಾದ್ ಮುಹಮ್ಮದ್ ಕುಂಞಿ
ಬೆಂಗಳೂರು: ಬೆಂಗಳೂರು ಬ್ಯಾರಿ ಜಮಾಅತ್ ಅಧ್ಯಕ್ಷ ಡಾ. ಅಬ್ದುಲ್ ಹಮೀದ್ ತೋಡಾರು ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಬೆಂಗಳೂರಿನ ಬ್ಯಾರಿ ಇಲ್ಮ್ ಸೆಂಟರಿನಲ್ಲಿ ಜರಗಿದ ಬೆಂಗಳೂರು ಬ್ಯಾರಿ ಜಮಾತಿನ 6ನೇ ತ್ರೈವಾರ್ಷಿಕ ಮಹಾಸಭೆಯಲ್ಲಿ ಜಮಾತಿನ 2026-29 ಸಾಲಿಗೆ ಅಧ್ಯಕ್ಷರಾಗಿ ಸವಾದ್ ಮುಹಮ್ಮದ್ ಕುಂಞಿ ಉಜಿರೆ ಅರವರನ್ನು ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಅಡ್ವೊಕೇಟ್ ಅಬ್ದುಲ್ ಲತೀಫ್ ಮುಂಡೋಲ್, ಮುಹಮ್ಮದ್ ಯೂಸುಫ್ ಇಡ್ಯಾ, ಪ್ರಧಾನ ಕಾರ್ಯದರ್ಶಿ ಅಹ್ಮದ್ ಶರೀಫ್ ವಗ್ಗ, ಸಹ ಕಾರ್ಯದರ್ಶಿಗಳಾಗಿ ರಿಯಾಝ್ ಮೆಲ್ಕಾರ್, ಹಸೈನಾರ್ ಡಿಲೈಟ್, ಕೋಶಾಧಿಕಾರಿ ರಿಝ್ವಾನ್ ಮೈಂದಾಳ, ಆಂತರಿಕ ಲೆಕ್ಕಪರಿಶೋಧಕರಾಗಿ ನಾಸರ್ ಹುಸೇನ್ ಎಮ್.ಪಿ ಮತ್ತು 15 ಸದಸ್ಯರ ಕಾರ್ಯಕಾರಿ ಸದಸ್ಯರನ್ನೊಳಗೊಂಡ ಕಾರ್ಯಕಾರಣಿಯನ್ನು ರಚಿಸಲಾಯಿತು.
ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಹುಸೈನ್ ಸಿರಾಜ್ ರವರು 2023-26 ಸಾಲಿನ ವರದಿ ಮತ್ತು ಆಯುವ್ಯಯವನ್ನು ಮಂಡಿಸಿ ಮಂಜೂರು ಪಡೆದರು. ಸಭೆಯಲ್ಲಿ ಜಮಾಅತ್ ಮಾಜಿ ಅಧ್ಯಕ್ಷರಾದ ಹಾಜಿ ಹೈದರ್ ಜೋಕಟ್ಟೆ, ಇಬ್ರಾಹೀಂ ಇನೋಳಿ, ಹಿರಿಯರಾದ ಅಬ್ದುಲ್ ಹಮೀದ್ ಹಾಜಿ ಮಡಿಕೇರಿ ಮತ್ತಿತರರು ಉಪಸ್ಥಿತರಿದ್ದರು.




