Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಗದಗ
  4. ಡಿ.16, 17ರಂದು ಬೆಂಗಳೂರಿನಲ್ಲಿ ಒಂಟಿ...

ಡಿ.16, 17ರಂದು ಬೆಂಗಳೂರಿನಲ್ಲಿ ಒಂಟಿ ಮಹಿಳೆಯರ ಬೃಹತ್ ಚಲೋ: ಬಿ.ಮಾಳಮ್ಮ

ವಾರ್ತಾಭಾರತಿವಾರ್ತಾಭಾರತಿ22 Nov 2026 11:55 PM IST
share
ಡಿ.16, 17ರಂದು ಬೆಂಗಳೂರಿನಲ್ಲಿ ಒಂಟಿ ಮಹಿಳೆಯರ ಬೃಹತ್ ಚಲೋ: ಬಿ.ಮಾಳಮ್ಮ

ಗಜೇಂದ್ರಗಡ: ಆರ್ಥಿಕವಾಗಿ, ಸಾಮಾಜಿಕವಾಗಿ ಶೋಷಣೆಗೊಳಗಾದ ನಮ್ಮಗಳ ಹಕ್ಕೊತ್ತಾಯಗಳನ್ನು ಪರಿಗಣಿಸಲು ಮುಂಬರುವ 2027ರ ಬಜೆಟ್‌ನಲ್ಲಿ ನೆರವಾಗುವಂತೆ ಒತ್ತಾಯಿಸಿ ಡಿಸೆಂಬರ್ 16, 17ರಂದು ಬೆಂಗಳೂರಿನಲ್ಲಿ ಒಂಟಿ ಮಹಿಳೆಯರ ಬೃಹತ್ ಚಲೋ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ ರಾಜ್ಯ ಕಾರ್ಯದರ್ಶಿ ಬಿ ಮಾಳಮ್ಮ ತಿಳಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ರವಿವಾರ ನಡೆದ ತಾಲೂಕು ಮಟ್ಟದ ಒಂಟಿ ಮಹಿಳೆಯರ ಪ್ರಥಮ ತಾಲೂಕು ಸಮಾವೇಶದಲ್ಲಿ ಅವರು ಮಾತನಾಡಿದರು.

ಸ್ಮೃತಿಕಾರರ ಅಣತಿಯಂತೆ ಎಲ್ಲ ಮಹಿಳೆಯರನ್ನು ಅದಾಗಲೇ ಪುರುಷನ ಗುಲಾಮಳನ್ನಾಗಿಸಿ, ಶೂದ್ರಳನ್ನಾಗಿಸಿ, ಶಿಕ್ಷಣ, ಆಸ್ತಿ ಹಾಗೂ ಮರು ಮದುವೆ ಹಕ್ಕುಗಳನ್ನು ವಂಚಿಸಿ, ಜಾತಿ, ಧರ್ಮದ ಆಧಾರದಲ್ಲಿ ವಿಭಜಿಸಿದ್ದರು. ನಂತರ ಮೂಲೆ ಗುಂಪು ಮಾಡಿ ಶೋಷಣೆಯಲ್ಲಿಟ್ಟಿರುವುದು ತಮಗೀಗಾಲೇ ತಿಳಿದ ವಿಷಯ. ಮಹಿಳೆಯರಲ್ಲಿ ನಮ್ಮ ಒಂಟಿ ಮಹಿಳೆಯರ ಪಾಡು ಹೇಳತೀರದಾಗಿದೆ. ನಾವು ಕೇವಲ ಲಿಂಗ ಹಾಗೂ ಜಾತಿ ತಾರತಮ್ಯಕ್ಕೆ ಒಳಗಾದವರು ಮಾತ್ರವಲ್ಲ, ನಾವು ತೀವ್ರ ರೀತಿಯ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದವರಾಗಿದ್ದೇವೆ. ನಿತ್ಯ ಅಪಮಾನ ನಿಂದನೆಗಳನ್ನು ಎದುರಿಸುತ್ತಿದ್ದೇವೆ. ದಲಿತರನ್ನು ಊರಾಚೆ ಇಟ್ಟು ಮುಟ್ಟಿಸಿಕೊಳ್ಳದೇ ದೂರ ತಳ್ಳಿದರೆ, ನಮ್ಮ ಮಹಿಳೆಯರಿಗೆ ಮದುವೆ, ಮರು ಮದುವೆಗಳನ್ನು ನಿರಾಕರಿಸಿ ಸಾಮಾಜಿಕ ಬಹಿಷ್ಕಾರಕ್ಕೊಳಪಡಿಸಲಾಗಿದೆ ಎಂದರು.

ಬಣ್ಣವಿಲ್ಲವೆಂದೋ, ವರದಕ್ಷಿಣೆ ನೀಡಲು ಹಣವಿಲ್ಲವೆಂದೋ, ಅಂಗವಿಕಲಳೆಂದೋ, ಒಕ್ಕೂಟ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತರುತ್ತಿರುವ ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ನೀತಿಗಳಿಂದಾದ ನಿರುದ್ಯೋಗ ಮತ್ತು ವೈವಾಹಿಕ ಆಯ್ಕೆಗಳ ಕಾರಣದಿಂದ ಮದುವೆಯಾಗದೇ ಅವಿವಾಹಿತಳಾಗಿಯೇ ಉಳಿದು ಒಂಟಿಯಾದವರು, ಗಂಡ ಬಿಟ್ಟವರು ಹಾಗೂ ಗಂಡ ಸತ್ತ ಕಾರಣಕ್ಕೆ ವಿಧವೆಯೆಂದು ಅಪಮಾನಿತಳಾದವರು, ಅದೇ ರೀತಿ, ದೌರ್ಜನ್ಯದ ದೇವದಾಸಿ ಪದ್ಧತಿಗೆ ಬಲಿಯಾದುದಕ್ಕೆ ಒಂಟಿ ಜೀವನ ನಡೆಸುವ ಮಹಿಳೆಯರು ನಾವಾಗಿದ್ದೇವೆ.

ಒಕ್ಕೂಟ ಹಾಗೂ ರಾಜ್ಯ ಸರಕಾರಗಳು ಬಹುತೇಕ ಪುರುಷ ಪ್ರಧಾನ ಹಾಗೂ ಮೇಲ್ಜಾತಿ ಮತ್ತು ಮೇಲ್ವರ್ಗಗಳ ಪರವಾಗಿ ಕಾರ್ಯ ನಿರ್ವಹಿಸುವುದರಿಂದ ಲಿಂಗ ತಾರತಮ್ಯದ ಬದುಕಿನಿಂದ ಹೊರ ಬರಲು ಸಾಧ್ಯವಾಗಲಿಲ್ಲ. ಮಹಿಳಾ ಅಭಿವೃದ್ಧಿಗೆ ಮಹಿಳೆಯರ ಜನಸಂಖ್ಯೆಯ ಅನುಪಾತದ ಆಧಾರದಲ್ಲಿ ಬಜೆಟ್‌ಗಳಲ್ಲಿ ಅನುದಾನ ಒದಗಿಸುತ್ತಿಲ್ಲ. ದೇವದಾಸಿ ಪುನರ್ವಸತಿ ಮಾದರಿಯಲ್ಲಿ ದೇವದಾಸಿಯೇತರ ಒಂಟಿ ಮಹಿಳೆಯರನ್ನು ಪ್ರತ್ಯೇಕವಾಗಿ ಗುರುತಿಸಿ, ಆದ್ಯತೆಯ ಮೇರೆಗೆ ಪುನರ್ವಸತಿಗೆ ಕ್ರಮ ವಹಿಸಲು ಸರಕಾರಗಳು ಅನುದಾನ ಒದಗಿಸುವಲ್ಲಿ ಬೇರು ಬಿಟ್ಟಿರುವ ಲಿಂಗ ತಾರತಮ್ಯವನ್ನು ಕಿತ್ತು ಬಿಸಾಡಬೇಕಿದೆ. ಅದರಲ್ಲಿ ಶೇ.33ರಷ್ಟು ಮೊತ್ತವನ್ನು ನಮಗೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಗೌರವಾಧ್ಯಕ್ಷ ಬಾಲು ರಾಠೋಡ ಮಾತನಾಡಿ, ಒಂಟಿ ಮಹಿಳೆಯರ ಗಣತಿಯನ್ನು ಪೂರ್ಣ ಮಾಡಿ ಪ್ರಕಟಿಸಬೇಕು. ಅದೇ ರೀತಿ, ಒಂಟಿ ಮಹಿಳೆಯರ ಮಕ್ಕಳ ಗಣತಿಗೂ ಕ್ರಮ ವಹಿಸಬೇಕು. ದೇವದಾಸಿ ಪುನರ್ವಸತಿ ಮಾದರಿಯಲ್ಲಿ ಪರಿಣಾಮಕಾರಿ ಪುನರ್ವಸತಿಗೆ ಕ್ರಮ ವಹಿಸಬೇಕು. ಒಂಟಿ ಮಹಿಳೆಯರಿಗೆ ಮಾಸಿಕ ಸಹಾಯಧನ/ ಪಿಂಚಣಿ ಕನಿಷ್ಠ 6000 ರೂ. ಒದಗಿಸಬೇಕು. ಒಂಟಿ ಮಹಿಳೆಯರು, ಗಂಡ ಬಿಟ್ಟ ಹಾಗೂ ಸತ್ತ ಯುವತಿಯರು ಹಾಗೂ 50 ವರ್ಷದೊಳಗಿನ ಮಹಿಳೆಯರ ಸಾಮಾಜಿಕ ಬಹಿಷ್ಕಾರದ ಪರಿಹಾರವಾಗಿ 10 ಲಕ್ಷ ರೂ. ಇಡುಗಂಟು ಘೋಷಿಸಬೇಕು. ಇಂತಹ ಬಹಿಷ್ಕೃತರನ್ನು ಮರು ವಿವಾಹವಾಗಲು ಮುಂದೆ ಬರುವ ಪುರುಷರಿಗೆ ಪ್ರೋತ್ಸಾಹಧನ ನೀಡಬೇಕು. ವಿದ್ಯಾವಂತ ಮಹಿಳೆಗೆ ಉದ್ಯೋಗ ಒದಗಿಸಿ ಇಲ್ಲವೇ ನಿರುದ್ಯೋಗ ಭತ್ಯೆ ಮಾಸಿಕ 10,000 ರೂ ಒದಗಿಸಿರಿ. ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕೆ ಅಗತ್ಯ ನೆರವು ಬೇಕು. ದೌರ್ಜನ್ಯಕ್ಕೊಳಗಾಗಿ ಗರ್ಭಿಣಿ ಹಾಗೂ ಬಾಣಂತಿಯರಾದ ಒಂಟಿ ಮಹಿಳೆಯರಿಗೆ ಕನಿಷ್ಠ 18 ತಿಂಗಳ ಕಾಲ ಮಾಸಿಕ 10 ಸಾವಿರ ರೂ. ವಿಶೇಷ ನೆರವು ಹಾಗೂ ವೈದ್ಯಕೀಯ ರಕ್ಷಣೆ ಒದಗಿಸಬೇಕು. ಒಂಟಿ ಮಹಿಳೆಯರು, ಗಂಡ ಸತ್ತ ಹಾಗೂ ಬಿಟ್ಟ ಮಹಿಳೆಯರ ಹಾಗೂ ಅವರ ಮಕ್ಕಳ ರಕ್ಷಣೆಗೆ ಸೂಕ್ತ ಕಾನೂನು ರಚಿಸಿರಿ. ಒಂಟಿ ಮಹಿಳೆಯರ ಸಾಮಾಜಿಕ ಬಹಿಷ್ಕಾರ ನಿಷೇಧ ಕಾಯ್ದೆ ಹಾಗೂ ಅವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಗೆ ಕ್ರಮ ವಹಿಸಬೇಕು.

ಹಿತ್ತಲು ಹಾಗೂ ನಿವೇಶನ ಸಹಿತ ಉಚಿತ ಮನೆಯನ್ನು ಒದಗಿಸಿರಿ. ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಅದಕ್ಕೆ ಅಗತ್ಯ 14 ಸಾಮಗ್ರಿಗಳನ್ನು ಒದಗಿಸಬೇಕು. ಸ್ವಯಂ ಉದ್ಯೋಗ ತರಬೇತಿ ಒದಗಿಸಿ ಮತ್ತು ಶೇ.75 ಸಹಾಯಧನ ಉಳ್ಳ ಉಳಿದ ಶೇ.25 ಕ್ಕೆ ಐದು ವರ್ಷ ಕಾಲ ಬಡ್ಡಿ ಇರದ ಹತ್ತು ಲಕ್ಷ ರೂ ಸಾಲ ಒದಗಿಸಬೇಕು. ಕೃಷಿಯಲ್ಲಿ ತೊಡಗುವವರಿಗೆ ಕನಿಷ್ಠ ಐದು ಎಕರೆ ನೀರಾವರಿ ಜಮೀನು, ಸಾಲ ಮತ್ತಿತರೆ ಸೌಲಭ್ಯ ಒದಗಿಸಬೇಕು.

ಮಹಿಳಾ ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಮೀಸಲಾತಿಗಳಲ್ಲಿ ಒಂಟಿ ಮಹಿಳೆಯರಿಗೆ ಮತ್ತು ಅವರ ಮಕ್ಕಳಿಗೆ ಆದ್ಯತೆ ನೀಡಬೇಕು.

ವಯೋವೃದ್ಧ ಒಂಟಿ ಮಹಿಳೆಯರ ರಕ್ಷಣೆಗೆ ಉಚಿತ ಊಟ, ವಸತಿ, ವಸ್ತ್ರ ಸಹಿತ ಸರಕಾರಿ ವೃದ್ಧಾಶ್ರಮಗಳನ್ನು ಕನಿಷ್ಠ ತಾಲೂಕಿಗೆ ಒಂದರಂತೆ ತೆರೆಯಬೇಕು. ಮಹಿಳೆಯರ ಜನಸಂಖ್ಯೆಗನುಗುಣವಾಗಿ ಒಕ್ಕೂಟ ಹಾಗೂ ರಾಜ್ಯ ಸರಕಾರಗಳ ಬಜೆಟ್ ಗಳಲ್ಲಿ ಅನುದಾನ ಒದಗಿಸಬೇಕು. ಅದರಲ್ಲಿ ಶೇ.33 ಮೊತ್ತವನ್ನು ಒಂಟಿ ಮಹಿಳೆಯರ ಪುನರ್ವಸತಿಗೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಸಮಾವೇಶದಲ್ಲಿ ತಾಲೂಕು ಸಮಿತಿ ರಚಿಸಲಾಯಿತು‌ ಅಧ್ಯಕ್ಷರಾಗಿ ಶರಣಂ ವಾಲೆ, ಕಾರ್ಯದರ್ಶಿಯಾಗಿ ಲಕ್ಷ್ಮವ್ವ ಗುಗಲೋತ್ತರ, ಉಪಾಧ್ಯಕ್ಷರಾಗಿ ರೇಣುಕಾ ಕೊನ್ನಣ್ಣವರ್, ಅಕ್ಕಮ್ಮ ರಾಠೋಡ, ಸದಸ್ಯರಾಗಿ ಕವಿತಾ ಲಮಾಣಿ, ಕವಿತಾ ಬಂಡಿ ವಡ್ಡರ್, ಸುನಿತಾ ರಾಥೋಡ್, ಶಿವಮ್ಮ, ಪ್ರೇಮವ್ವ, ಸರೋಜ ಮಾಳೋತ್ತರ ಅವರನ್ನು ಆಯ್ಕೆ ಮಾಡಲಾಯಿತು.

ಸಮಾವೇಶದಲ್ಲಿ ಶರಣು ಮಾಟ್ರಂಗಿ, ರವಿತೇಜ ಮಾದಿ, ಅನಿಲ್ ಆರ್., ಅಲ್ಲಮ್ಮ ಮಾಲದಾರ್, ಲಕ್ಷ್ಮಿಬಾಯಿ ಪವಾರ್, ಎಲ್ಲವ್ವ ಮಾದರ್, ರತ್ನವ್ವ ಬಡಿಗೇರ್, ‌ಅನುಸುಯಾ, ಜೀಜಾಬಿ ಉಟಗಾರ್, ಮೈಬು ಹವಾಲ್ದಾರ್ ಮುಂತಾದವರು ಭಾಗವಹಿಸಿದ್ದರು.

Tags

B. MalammaSingle WomenBengaluru
share
ವಾರ್ತಾಭಾರತಿ
ವಾರ್ತಾಭಾರತಿ
Next Story
X