Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಆ.15ಕ್ಕೆ ಮತದಾರರ ಹಕ್ಕು ಪ್ರತಿಪಾದನಾ...

ಆ.15ಕ್ಕೆ ಮತದಾರರ ಹಕ್ಕು ಪ್ರತಿಪಾದನಾ ದಿನಾಚರಣೆ; ಎಸ್‍ಐಆರ್ ವಿರೋಧಿ ಒಕ್ಕೂಟದಿಂದ ‘ಮತರಕ್ಷಣೆಗಾಗಿ ಜನ ಜಾಗೃತಿ ಅಭಿಯಾನ’

ವಾರ್ತಾಭಾರತಿವಾರ್ತಾಭಾರತಿ8 Aug 2026 6:34 PM IST
share
ಆ.15ಕ್ಕೆ ಮತದಾರರ ಹಕ್ಕು ಪ್ರತಿಪಾದನಾ ದಿನಾಚರಣೆ; ಎಸ್‍ಐಆರ್ ವಿರೋಧಿ ಒಕ್ಕೂಟದಿಂದ ‘ಮತರಕ್ಷಣೆಗಾಗಿ ಜನ ಜಾಗೃತಿ ಅಭಿಯಾನ’

ಬೆಂಗಳೂರು : ರಾಜ್ಯಾದ್ಯಂತ ಆ.15ರ ಸ್ವಾತಂತ್ರ್ಯ ದಿನದಂದು ‘ಮತದಾರರ ಹಕ್ಕು ಪ್ರತಿಪಾದನಾ’ ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಮತದಾರರಿಗೆ ಇರುವ ಹಕ್ಕುಗಳು, ಮತರಕ್ಷಣೆ ಮಾಡಿಕೊಳ್ಳುವ ಅಗತ್ಯದ ಕುರಿತು ‘ಎಸ್‍ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟ’ದ ವತಿಯಿಂದ 15 ದಿನಗಳ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಪದಾಧಿಕಾರಿ ನೂರ್ ಶ್ರೀಧರ್ ತಿಳಿಸಿದ್ದಾರೆ.

ಶನಿವಾರ ನಗರದ ಶಾಸಕರ ಭವನದಲ್ಲಿ ಒಕ್ಕೂಟದ ವತಿಯಿಂದ ‘ಎಸ್‍ಐಆರ್ ಸುನಾಮಿಯಿಂದ ಕರ್ನಾಟಕವನ್ನು ರಕ್ಷಿಸಿಕೊಳ್ಳುವ’ ಕುರಿತು ಆಯೋಜಿಸಿದ್ದ ರಾಜ್ಯ ಮಟ್ಟದ ದುಂಡುಮೇಜಿನ ಸಭೆಯಲ್ಲಿ ತೆಗೆದುಕೊಂಡ ತೀರ್ಮಾಣಗಳನ್ನು ಮಾಧ್ಯಮಗಳಿಗೆ ತಿಳಿಸಿದರು. ಚುನಾವಣಾ ಆಯೋಗ ಪ್ರಕಟನೆ ಮಾಡಿರುವ 1.10ಕೋಟಿಗೂ ಅಧಿಕ ಮತದಾರರು ಎಎಸ್‍ಡಿಡಿಒ ಹಾಗೂ 34ಲಕ್ಷ ಜನ ಅನ್‍ಮ್ಯಾಪಿಂಗ್ ಪಟ್ಟಿಯಲ್ಲಿರುವುದು ಅಘಾತಕಾರಿಯಾಗಿದೆ ಎಂದರು.

ಜನ ಚಳವಳಿಗಳ ಒತ್ತಡದಿಂದ ಆಯೋಗ ಮೊದಲ ಹಂತದ ಪ್ರಕ್ರಿಯೆಯನ್ನು 10ದಿನಗಳ ಕಾಲ ವಿಸ್ತರಿಸಿರುವ ಕ್ರಮವನ್ನು ಸ್ವಾಗತಿಸುತ್ತೇವೆ. ಆದರೆ ಈಗಿರುವ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಈ ಸಮಯ ಸಾಕಾಗುವುದಿಲ್ಲ. ಆದುದರಿಂದ ಸೆಪ್ಟಂಬರ್ ತಿಂಗಳ ಕೊನೆಯ ವರೆಗೂ ವಿಸ್ತರಣೆ ಮಾಡಬೇಕು. ಮಾತ್ರವಲ್ಲ, ಜನರನ್ನು ಒಳಗೊಳ್ಳಲು ಬೇಕಾದಂತ ಕ್ರಮಗಳನ್ನು ಆಯೋಗ ತೆಗೆದುಕೊಳ್ಳಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು ಎಂದು ನೂರ್ ಶ್ರೀಧರ್ ಹೇಳಿದರು.

ಈಗಾಗಲೇ ಎಎಸ್‍ಡಿಡಿಒ ಪಟ್ಟಿಯಲ್ಲಿ ಏನೇನು ತಪ್ಪಾಗಿದಿಯೋ, ಆ ಎಲ್ಲ ತಪ್ಪುಗಳನ್ನು ಮತ್ತೊಮ್ಮೆ ಮನೆಮನೆಗೆ ಹೋಗಿ ಸರಿಪಡಿಸಬೇಕು. ಸ್ಥಳಾಂತರ ಹೆಸರಿನಲ್ಲಿ ಡಿಲೀಷನ್ ಮಾಡುವುದು ಬಿಟ್ಟು, ನಮೂನೆ-8ರ ಜೊತೆಗೆ ಗಣತಿ ನಮೂನೆ ನೀಡಿ ಅಷ್ಟೂ ಮತದಾರರನ್ನು ಮತಪಟ್ಟಿಯೊಳಗೆ ಒಳಗೊಳ್ಳುವ ಕೆಲಸ ಮಾಡಬೇಕು. ಚುನಾವಣಾ ಆಯೋಗ ಎಸ್‍ಐಆರ್ ಹೆಸರಿನಲ್ಲಿ ಮನೆಮನೆಗೆ ಹೋಗಿ ಮತದಾರರನ್ನು ಒಳಗೊಳ್ಳುವ ಬದಲಿಗೆ, ಡಿಲೀಟ್ ಮಾಡುವ ಕೆಲಸ ಮಾಡಿದೆ. ಆದುದರಿಂದ ಈಗ ಮೊತ್ತೊಮ್ಮೆ ಬಿಎಲ್‍ಒಗಳನ್ನು ಮನೆಮನೆಗೆ ಕಳುಹಿಸಿ, ಆಗಿರುವ ದೋಷಗಳನ್ನು ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಚಳವಳಿಗಳ ಒತ್ತಾಯದ ಮೇರೆಗೆ ರಾಜ್ಯ ಸರಕಾರ ಶಾಶ್ವತ ನಿವಾಸ ಪ್ರಮಾಣ ಪತ್ರವನ್ನು ಕೊಡುವ ತೀರ್ಮಾನ ಮಾಡಿದ್ದು, ಜಾತಿಪ್ರಮಾಣ ಪತ್ರವನ್ನು ಮನೆಮನೆಗೆ ವಿತರಿಸುತ್ತೇವೆಂದು ಹೇಳಿದ್ದು ಸ್ವಾಗತಾರ್ಹ. ಆದರೆ ಆ ಪ್ರಕ್ರಿಯೆ ಸಮಾಧಾನಕರವಾಗಿ ನಡೆಯುತ್ತಿಲ್ಲ. ಅದಲ್ಲದೇ, ಈ ದಾಖಲೆಗಳಿಗಾಗಿ ಜನ ಪರದಾಡಲು ಆಗುವುದಿಲ್ಲ. ಹಾಗಾಗಿ ಪ್ರತಿ ಪಂಚಾಯತ್, ವಾರ್ಡ್‍ಗಳಲ್ಲಿ ಸಹಾಯ ಕೇಂದ್ರಗಳನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಲಾಗಿತ್ತು. ಆದರೆ ಇದು ಬೆರಳೆಣಿಕೆಯಷ್ಟು ಕಡೆ ಮಾತ್ರ ಆಗಿದೆ. ಕೂಡಲೇ ರಾಜ್ಯಾದ್ಯಂತ ಸಂಪೂರ್ಣ ಪ್ರಮಾಣದಲ್ಲಿ ಜಾರಿಯಾಗುವಂತೆ ಕ್ರಮವಹಿಸಬೇಕು ಎಂದು ಅವರು ಆಗ್ರಹಿಸಿದರು.

ಒಂದು ವೇಳೆ ನಾಗರಿಕರ ಮನವಿಗಳಿಗೆ ಚುನಾವಣಾ ಆಯೋಗ ಮನ್ನಣೆ ಕೊಡದೇ, ಇದೇ ರೀತಿಯ ಅರ್ಹ ಮತದಾರರನ್ನು ದೊಡ್ಡಮಟ್ಟಕ್ಕೆ ಡಿಲೀಟ್ ಮಾಡಿ ಕರಡು ಪಟ್ಟಿಯನ್ನು ಪ್ರಕಟಿಸಿದ್ದೇ ಆದಲ್ಲಿ, ಎಲ್ಲ ಡಿಲೀಟ್ ಆದ ಅರ್ಹ ಮತದಾರರ ಜೊತೆಗೆ ಚುನಾವಣಾ ಆಯೋಗದ ಮುಂದೆ ಅನಿರ್ದಿಷ್ಟಾವಧಿ ಹೋರಾಟ ಮಾಡಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು ಎಂದು ನೂರ್ ಶ್ರೀಧರ್ ಮಾಹಿತಿ ನೀಡಿದರು.

ಸಭೆ ನಂತರದಲ್ಲಿ ಎಸ್‍ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟದ ಎಲ್ಲ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು. ಈ ವೇಳೆಯಲ್ಲಿ ಎಸ್‍ಯುಸಿಐನ ಕೆ.ವಿ.ಭಟ್, ಸಿಪಿಎಂನ ಕೆ.ಮಹಾಂತೇಶ್, ಆಮ್ ಆದ್ಮಿ ಪಕ್ಷದ ಸೀತಾರಾಮ ಗುಂಡಪ್ಪ, ಜಮಾತೆ ಇಸ್ಲಾಮ್ ಹಿಂದ್‍ನ ಮುಹಮ್ಮದ್ ಯೂಸುಫ್ ಕನ್ನಿ, ಎದ್ದೇಳು ಕರ್ನಾಟಕದ ತಾರಾರಾವ್, ಕೆ.ಎಲ್.ಅಶೋಕ್, ಮಲ್ಲಿಗೆ ಸಿರಿಮನೆ, ಕರ್ನಾಟಕ ಜನಶಕ್ತಿಯ ಕುಮಾರ್ ಸಮತಳ, ಪರಿಷತ್ ಸದಸ್ಯ ರಮೇಶ್ ಬಾಬು, ಒಕ್ಕೂಟ ಸದಸ್ಯರಾದ ಡಾ.ಪೂರ್ಣಾನಂದ, ರಮೇಶ್ ಬೆಲ್ಲಂಕೊಂಡ, ಒಳಮೀಸಲಾತಿ ಹೋರಾಟಗಾರರಾದ ಕರಿಯಪ್ಪ ಗುಡಿಮನಿ, ಅಂಬಣ್ಣ ಅರೋಲಿಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

‘ಬಿಜೆಪಿ ಮತ್ತು ಜೆಡಿಎಸ್ ಹೊರತುಪಡಿಸಿ, ನಾವೆಲ್ಲರೂ ನಿರ್ದಿಷ್ಟ ಸಮಸ್ಯೆಯ ವಿರುದ್ಧ ಹೋರಾಡಲು ಒಟ್ಟಿಗೆ ಸೇರಿದ್ದೇವೆ. ನಾಗರಿಕ ಸಮಾಜದ ಪ್ರಯತ್ನಕ್ಕೆ ಧನ್ಯವಾದಗಳು. ಒಕ್ಕೂಟದ ಜೊತೆ ಸಂಪೂರ್ಣ ಸಹಕಾರದೊಂದಿಗೆ ಕೆಲಸ ಮಾಡುತ್ತೇವೆ. ಯಾರದ್ದೆಲ್ಲ ಮತ ಡಿಲೀಟ್ ಆಗಿದೆಯೋ ಅವರು ಯಾರು ಭಯ ಪಡುವ ಅಗತ್ಯ ಇಲ್ಲ, ಅವರೊಂದಿಗೆ ಸರಕಾರ ಇದೆ. ಸರಕಾರದ ಮುಂದೆ ಇಟ್ಟಿರುವ ಹಕ್ಕೊತ್ತಾಯಗಳನ್ನು ಈಡೇರಿಸಲು ಸಿಎಂ ಡಿ.ಕೆ.ಶಿವಕುಮಾರ್ ಜತೆ ಸಭೆ ಏರ್ಪಡಿಸಲಾಗುವುದು’

-ಜಿ.ಸಿ.ಚಂದ್ರಶೇಖರ್, ಸಿಎಂ ರಾಜಕೀಯ ಸಲಹೆಗಾರ

Tags

SIR
share
ವಾರ್ತಾಭಾರತಿ
ವಾರ್ತಾಭಾರತಿ
Next Story
X