Tumakur | ಕಾರುಗಳ ನಡುವೆ ಢಿಕ್ಕಿ: ನಾಲ್ವರ ಮೃತ್ಯು

ತುಮಕೂರು : ಜಿಲ್ಲೆಯ ಚಿಕ್ಕನಾಯಕನಹಳ್ಳಿ-ಕೆ ಬಿ.ಕ್ರಾಸ್ ರಸ್ತೆಯ ಗೋಡೆಕೆರೆ ಸಮೀಪ ಎರಡು ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟಿದ್ದು, ಐವರಿಗೆ ಗಂಭೀರ ಗಾಯಗಳಾಗಿರುವ ಘಟನೆ ವರದಿಯಾಗಿದೆ.
ಚಿಕ್ಕನಾಯಕನಹಳ್ಳಿಯ ಅನಿಲ್ (32) ವಿವೇಕ್ (31), ತುರುವೇಕೆರೆಯ ದಾವೂದ್ ಪಾಷಾ ಹಾಗೂ ಅವರ ಪುತ್ರಿ ಆನಮ್ (3) ಮೃತರು ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ
Next Story




