ಬೀದರ್ ಜಿಲ್ಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಯ ಮೊದಲ ದಿನ 1,039 ವಿದ್ಯಾರ್ಥಿಗಳು ಗೈರು

ಬೀದರ್ : ಇಂದು ಪ್ರಾರಂಭವಾದ ಎಸೆಸೆಲ್ಸಿ ಪರೀಕ್ಷೆಯ ಪ್ರಥಮ ಭಾಷೆ ಕನ್ನಡ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 1,039 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಒಟ್ಟು 26,507 ವಿದ್ಯಾರ್ಥಿಗಳಲ್ಲಿ 25,468 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದರು. ಇದರಲ್ಲಿ ಔರಾದ್ 108, ಬಸವಕಲ್ಯಾಣ 195, ಭಾಲ್ಕಿ 228, ಬೀದರ್ 316 ಹಾಗೂ ಹುಮನಾಬಾದ್ ನಲ್ಲಿ 192 ವಿದ್ಯಾರ್ಥಿಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 1,039 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.
Next Story





