ಡಿ.13ರಿಂದ ಬಸವಕಲ್ಯಾಣದಲ್ಲಿ 11ನೇ ವಾರ್ಷಿಕ ಕುರ್‌ಆನ್ ಪ್ರವಚನ ಕಾರ್ಯಕ್ರಮ

ಬೀದರ್: ಬಸವಕಲ್ಯಾಣದಲ್ಲಿ ಡಿಸೆಂಬರ್ 13, 14 ಮತ್ತು 15ರಂದು 11ನೇ ವಾರ್ಷಿಕ ಸಾರ್ವಜನಿಕ ಕುರ್‌ಆನ್ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ನಗರದ ಬಿಕೆಡಿಬಿ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯಲ್ಲಿ 11ನೇ ವಾರ್ಷಿಕ ಕುರ್‌ಆನ್ ಪ್ರವಚನ ಸ್ವಾಗತ ಸಮಿತಿಯ ರಚನೆ ಹಾಗೂ ಪದಾಧಿಕಾರಿಗಳ ಜವಾಬ್ದಾರಿಗಳ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ನಗರದ ಹಲವು ಪ್ರಮುಖರು ಉಪಸ್ಥಿತರಿದ್ದು, ಎಲ್ಲರ ಒಮ್ಮತದೊಂದಿಗೆ ಸ್ವಾಗತ ಸಮಿತಿಯ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಡಾ. ಜಿ.ಎಸ್. ಭುರಾಳೆ ಅವರನ್ನು ಗೌರವಾಧ್ಯಕ್ಷರಾಗಿ, ಕೇಶಪ್ಪ ಬಿರಾದಾರ್ ಅವರನ್ನು ಅಧ್ಯಕ್ಷರಾಗಿ, ಮುಜಾಹಿದ್ ಪಾಷಾ ಖುರೇಶಿ ಅವರನ್ನು ಕಾರ್ಯಾಧ್ಯಕ್ಷರಾಗಿ, ಶಾಂತಲಿಂಗ್ ಮಠಪತಿ ಅವರನ್ನು ಕಾರ್ಯದರ್ಶಿಯಾಗಿ, ಸಂದೀಪ್ ಬೂಯೆ ಅವರನ್ನು ಜಂಟಿ ಕಾರ್ಯದರ್ಶಿಯಾಗಿ ಹಾಗೂ ರೇಖಾ ಹುಸಾಮಣಿ ಅವರನ್ನು ಮಹಿಳಾ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ 11ನೇ ವಾರ್ಷಿಕ ಕುರ್‌ಆನ್ ಪ್ರವಚನ ಕಾರ್ಯಕ್ರಮದ ಪೋಸ್ಟರ್‌ನ್ನು ಅನಾವರಣಗೊಳಿಸಲಾಯಿತು. ಡಿಸೆಂಬರ್ 13, 14 ಮತ್ತು 15ರಂದು ಬಸವಕಲ್ಯಾಣದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಲಾಯಿತು.
ಸಭೆಯಲ್ಲಿ ಜಮಾತ್-ಎ-ಇಸ್ಲಾಮಿ ಹಿಂದ್ ಬಸವಕಲ್ಯಾಣ ಅಧ್ಯಕ್ಷ ಅಸ್ಲಂ ಜನಾಬ್, ಗುರುನಾಥ್ ಗಡ್ಡೆ, ಎರಣ್ಣ ಹಾಲಶಟ್ಟಿ, ಮೀರ್ ವಾರಿಸ್ ಅಲಿ, ಸಂದೀಪ್ ಮುಕಂದೆ, ಘೌಸ್ ಅಲಂಕಾರ್, ಅರ್ಷದ್ ಮಹಾಗಾವಿ, ಅಡ್ವೊಕೇಟ್ ಸುಶೀಲ್ ಅವಸ್ತಿ, ಹುಜೂರ್ ಪಾಷಾ, ಅರ್ಫತ್ ಅಹ್ಮದ್, ಮೊಹಮ್ಮದ್ ಕುತುಬುದ್ದೀನ್, ಓಂ ಪಾಟೀಲ್, ಶಾಹಿದಾ ಬಾನು, ಖುರೇಶಿ ಹಾಗೂ ಫರ್ಜಾನಾ ನಜ್ಮಿ ಭೋಸ್ಗೆ ಸೇರಿದಂತೆ ನಗರದ ಹಲವು ಗಣ್ಯರು ಉಪಸ್ಥಿತರಿದ್ದರು.






