ಬೀದರ್‌ನಲ್ಲಿ 3 ಸ್ಕ್ಯಾನಿಂಗ್ ಕೇಂದ್ರಗಳು ಮುಟ್ಟುಗೋಲು

ಬೀದರ್: ಜಿಲ್ಲೆಯ ಹುಮನಾಬಾದ್, ಭಾಲ್ಕಿ, ಬಸವಕಲ್ಯಾಣ ಹಾಗೂ ಔರಾದ್ (ಬಿ) ಪಟ್ಟಣಗಳಲ್ಲಿರುವ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಬೆಂಗಳೂರಿನ 'ಪಿಸಿ ಮತ್ತು ಪಿಎನ್ಡಿಟಿ' ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಿಯಮ ಉಲ್ಲಂಘಿಸಿದ ಮೂರು ಕೇಂದ್ರಗಳನ್ನು ಮುಟ್ಟುಗೋಲು ಹಾಕಲಾಗಿದೆ.
ಬೆಂಗಳೂರಿನ ಉಪ ನಿರ್ದೇಶಕರಾದ ಡಾ. ವಿವೇಕ್ ದೊರೈ ಅವರ ನೇತೃತ್ವದ ತಂಡವು ಜ.6 ಮತ್ತು 7 ರಂದು ಜಿಲ್ಲೆಯ ಸುಮಾರು 8 ವಿವಿಧ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿತ್ತು. ಈ ವೇಳೆ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆಯಡಿ ಸ್ಪಷ್ಟ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಈ ಕೆಳಗಿನ ಆಸ್ಪತ್ರೆಗಳ ಸ್ಕ್ಯಾನಿಂಗ್ ಕೇಂದ್ರಗಳನ್ನು ಸ್ಥಗಿತಗೊಳಿಸಿ ಮುಟ್ಟುಗೋಲು ಮಾಡಲಾಗಿದೆ.
ಬಸವಕಲ್ಯಾಣದ ನ್ಯೂ ರೀಫಾ ಆಸ್ಪತ್ರೆ, ಔರಾದ್ (ಬಿ)ನ ವಿಶ್ವ ಮತ್ತು ಮುಗಳೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಭಾಲ್ಕಿಯಲ್ಲಿ ಜಿಜಾಮಾತಾ ಆಸ್ಪತ್ರೆಯನ್ನು ಮುಟ್ಟುಗೋಲು ಮಾಡಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ್ ನಿರುಗುಡೆ, ಜಿಲ್ಲಾ ಜಾರಿ ಅಧಿಕಾರಿ ಹಾಗೂ ಜಿಲ್ಲಾ ಪಿ.ಸಿ ಮತ್ತು ಪಿ.ಎನ್.ಡಿ.ಟಿ ನೋಡಲ್ ಅಧಿಕಾರಿ ಡಾ. ದಿಲೀಪ್ ಡೂಂಗ್ರೆ, ಪಿ.ಸಿ ಮತ್ತು ಪಿ.ಎನ್.ಡಿ.ಟಿ ರಾಜ್ಯ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯ ಸದಸ್ಯ ವಸಂತಕುಮಾರ್, ಕಾನೂನು ಸಲಹೆಗಾರರಾದ ಮೋನಿಶಾ ಡಿ.ಎನ್, ದ್ವಿತೀಯ ದರ್ಜೆ ಸಹಾಯಕ ಅನೀಲ್ ಥಾಮಸ್, ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾರ್ಯಕ್ರಮ ಸಲಹೆಗಾರ ಬನಾಮಾ ಎಸ್ ಸಜ್ಜನ್, ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯ ಸದಸ್ಯ ಡಾ.ಅಬ್ರಾರ್ ಖಾದ್ರಿ, ಡಾ. ಅಶೋಕ್ ಕಟ್ಟಿಮನಿ ಹಾಗೂ ಪಿ.ಸಿ ಮತ್ತು ಪಿ.ಎನ್.ಡಿ.ಟಿ ವಿಷಯ ನಿರ್ವಾಹಕ ಮಹೇಶ್ವರ್ ರಡ್ಡಿ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.







