ಫೆ.1ರಂದು ಶಿವಶರಣ ಮಾದಾರ ಚನ್ನಯ್ಯ ಅವರ 974 ನೇ ಜಯಂತ್ಯೋತ್ಸವ ಆಚರಣೆ : ಸ್ವಾಮಿದಾಸ್ ಕೆಂಪೆನೋರ್

ಬೀದರ್ : ನಗರದ ನೌಬಾದ್ ನಲ್ಲಿರುವ ಡಾ. ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ಕಾಯಕಯೋಗಿ, ಶಿವಶರಣ ಮಾದಾರ ಚನ್ನಯ್ಯ ಅವರ 974 ನೇ ಜಯಂತ್ಯೋತ್ಸವ ಹಾಗೂ ಅನ್ನದಾಸೋಹ ಮತ್ತು ನೂತನ ದಿನದರ್ಷಿಕೆ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಮಾದಿಗ ವೆಲ್ಪರ್ ಅಸೋಶಿಯಶನ್ ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ್ ಕೆಂಪೇನೋರ್ ತಿಳಿಸಿದರು.
ಇಂದು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಜಿ ಈ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. ಸಾಮಾಜಿಕ ಕಾರ್ಯಕರ್ತ ವಾದಿರಾಜ ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅಂದು ಬೆಳಿಗ್ಗೆ 11:30 ಗಂಟೆಯಿಂದ ಸಾಯಂಕಾಲ 5 ಗಂಟೆ ವರೆಗೆ ಕರ್ನಾಟಕ ಮಾದಿಗ ವೆಲ್ಪರ್ ಅಸೋಶಿಯಶನ್ ಹಾಗೂ ಕಾಯಕಯೋಗಿ ಶಿವಶರಣ ಮಾದಾರ ಚನ್ನಯ್ಯ ಜಯಂತ್ಯೋತ್ಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ ಅನ್ನದಾಸೋಹ ಜರುಗಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ್ ಖಂಡ್ರೆ, ಪೌರಾಡಳಿತ ಸಚಿವ ರಹಿಮ್ ಖಾನ್, ಹಾಲಿ ಸಂಸದ ಸಾಗರ ಖಂಡ್ರೆ, ಮಾಜಿ ಕೇಂದ್ರ ಮಂತ್ರಿ ಭಗವಂತ ಖೂಬಾ, ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್, ಎಲ್ಲ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು, ನಮ್ಮ ಸಮಾಜದ ಧುರಿಣರು, ರಾಜಕೀಯ ಮುಖಂಡರು, ಸಾಹಿತಿಗಳು, ಚಿಂತನಕಾರರು ಸೇರಿದಂತೆ ಸಾವಿರಕ್ಕೂ ಅಧಿಕ ಜನರು ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದರು.
ಈ ಸುಂದರ ಕಾರ್ಯಕ್ರಮಕ್ಕೆ ಇನ್ನು ಹೆಚ್ಚಿನ ಜನರು ಭಾಗವಹಿಸಬೇಕು ಎಂದು ಮನವಿ ಮಾಡಿದ ಅವರು, ಈ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರು.
ದಯಾನಂದ್ ವಕೀಲ್, ದಲಿತ ಮುಖಂಡ ಪ್ರಕಾಶ್ ಹಳ್ಳಿಖೇಡ್, ನೀಲಕಂಠ್ ಭೇಂಡೆ, ಕಮಲಹಸನ್ ಬಾವಿದೊಡ್ಡಿ, ಜೇಮ್ಸ್ ಇಸ್ಲಾಂಪುರ್, ಶಿವರಾಜ್ ನೆಲವಾಳಕರ್, ಸೀಮನ್, ಮೋಹನ್, ಸಿದ್ದಾರ್ಥ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







