ಬೀದರ್ನಲ್ಲಿ ಜ.5ರಿಂದ 20ರವರೆಗೆ ಅಗ್ನಿಪಥ್ ಸೇನಾ ನೇಮಕಾತಿ ರ್ಯಾಲಿ

ಸಾಂದರ್ಭಿಕ ಚಿತ್ರ
ಬೀದರ್: ನಗರದ ನೆಹರು ಕ್ರೀಡಾಂಗಣದಲ್ಲಿ 2027ರ ಜ.5ರಿಂದ 20ರವರೆಗೆ ಬೆಳಗಾವಿಯ ಸೇನಾ ನೇಮಕಾತಿ ಕಚೇರಿಯ ವತಿಯಿಂದ ‘ಅಗ್ನಿಪಥ್’ ನೇಮಕಾತಿ ರ್ಯಾಲಿ ಆಯೋಜಿಸಲಾಗಿದೆ ಎಂದು ಆರ್ಎಂಒ ನೇಮಕಾತಿ ವೈದ್ಯಾಧಿಕಾರಿ ಮೇಜರ್ ಚಂದನ್ ಗೌತಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನವರಿ 5ರಿಂದ 20ರವರೆಗೆ ನಡೆಯಲಿರುವ ಈ ಸೇನಾ ನೇಮಕಾತಿ ರ್ಯಾಲಿಯು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಲು ಹಾಗೂ ಭಾರತೀಯ ಸೇನೆಗೆ ಸೇರ್ಪಡೆಯಾಗಲು ಯುವಜನರನ್ನು ಪ್ರೇರೇಪಿಸುವ ಉದ್ದೇಶ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
Next Story




