ಹಲ್ಲೆ ಆರೋಪ : ಬೀದರ್ ತಾಲ್ಲೂಕು ಪಂಚಾಯತ್ ಇಒ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲು

ಬೀದರ್ : ಹಲ್ಲೆ ಆರೋಪದ ಮೇರೆಗೆ ಬೀದರ್ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಮಾಣಿಕ್ ಪಾಟೀಲ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಗಾದಗಿ ಗ್ರಾಮದ ನಿವಾಸಿ ಹಾಗೂ ಸದ್ಯ ಹಳೆ ಆದರ್ಶ ಕಾಲೋನಿಯಲ್ಲಿ ವಾಸವಾಗಿರುವರೊರ್ವರು ಪ್ರಕರಣ ದಾಖಲಿಸಿದ್ದು, ಗಾದಗಿ ಗ್ರಾಮದಲ್ಲಿರುವ ತಮ್ಮ ಮನೆಯ ಬಗ್ಗೆ ಜಿಲ್ಲಾ ಪಂಚಾಯತಿಯವರು ತಾಲ್ಲೂಕು ಪಂಚಾಯತಿಯವರಿಗೆ ಪತ್ರ ಬರೆದಿದ್ದಾರೆ. ಇದರ ವಿಚಾರಣೆ ನಡೆಸಲು ನಾನು ತಾಲ್ಲೂಕು ಪಂಚಾಯತಿಗೆ ಹೋಗಿದ್ದಾಗ ಅಲ್ಲಿ ನನಗೆ ಅವಾಚ್ಯ ಶಬ್ದಗಳಿಂದ ಬೈದು, ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಮಾಣಿಕ್ ಪಾಟೀಲ್, ಪಂಚಾಯತ್ ರಾಜ್ ನ ಎ.ಡಿ ಸಂಜುಕುಮಾರ್, ನರೇಗಾ ಯೋಜನೆಯ ಎ.ಡಿ ಸುದೇಶಕುಮಾರ್ ಹಾಗೂ ಸಿಬ್ಬಂದಿ ಜಗನ್ನಾಥ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Next Story





