ಕಲೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ: ರಾಮೇಶ್ವರ್ ಬಿರಾದಾರ್

ಬೀದರ್: ಕಲೆ ಒಂದು ಸೌಂದರ್ಯದ ಭಗವಾಗಿದೆ. ಅದು ಮನಸ್ಸಿಗೆ ಶಾಂತಿ ನೀಡುತ್ತದೆ ಎಂದು ಮುಖ್ಯಗುರು ರಾಮೇಶ್ವರ್ ಬಿರಾದಾರ್ ಅವರು ಹೇಳಿದರು.
ಕಮಲನಗರದ ಶಾಂತಿವರ್ಧಕ ಪದವಿ ಪೂರ್ವ ಕಾಲೇಜು ಕಮಲನಗರನಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಎಜುಕೇಷನ್ ಆರ್ಟ್ ಮತ್ತು ಕಲ್ಚರರ್ ವೆಲ್ಫೇರ್ ಸೋಸೈಟಿ ಹಾಗೂ ಕನ್ನಡ ಮತ್ತು ಸಾಂಸ್ಕ್ರತಿ ಇಲಾಖೆಯವರ ಸಹಯೋಗದಲ್ಲಿ ಗುರುವಾರ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.
ರಂಗೋಲಿ ಇಳಿಸುವ ಕಲೆಗೆ ಒಂದು ಭಾರತೀಯ ಪರಂಪರೆಯ ಇತಿಹಾಸವಿದೆ. ಸುಖ, ಶಾಂತಿಗಾಗಿ ಮನೆಯ ಮುಂದೆ ಜನರು ರಂಗೋಲಿ ಬಿಡಿಸುತ್ತಾರೆ. ಇದಕ್ಕಿಂತ ಮುಂಚೆ ಅಕ್ಕಿಯಿಂದಲೇ ಮನೆ ಮುಂದೆ ರಂಗೋಲಿ ಬಿಡಿಸುತ್ತಿದ್ದರು. ಅದನ್ನು ತಿನ್ನಲು ಹಕ್ಕಿಗಳು ಬರುತ್ತಿದ್ದವು. ಆ ಹಕ್ಕಿಗಳ ಇಂಪಾದ ಧ್ವನಿ ಕೇಳುವುದೇ ಆನಂದವಾಗಿತ್ತು ಎಂದರು.
ಓಂಕಾಂತ್ ಸೂರ್ಯಾವಂಶಿ ಅವರು ಮಾತನಾಡಿ, ಯಾವುದೆ ಕೆಲಸ ಮಾಡಿದರೂ ಕೂಡ ಭಕ್ತಿಯಿಂದ ಮಾಡಬೇಕು. ಕಲೆ ಕೂಡ ಸೃದ್ದೆ, ಭಕ್ತಿಯಿಂದ, ಭಾವನೆಯಿಂದ ಮಾಡಿದರೆ ಒಲಿಯುತ್ತದೆ. ಯಾವುದೇ ಕೆಲಸ ಮಾಡಿದರೂ ಕೂಡ ಮನಸ್ಸಿಟ್ಟು ಮಾಡಬೇಕು ಎಂದು ಹೇಳಿದರು.
ಈ ರಂಗೋಲಿ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಇದರಲ್ಲಿ ಪ್ರಿಯಾ ಪ್ರಥಮ ಸ್ಥಾನ, ಪ್ರಿಯಂಕಾ ದ್ವಿತಿಯ ಸ್ಥಾನ ಹಾಗೂ ರಾಜೇಶ್ವರಿ ತೃತಿಯ ಸ್ಥಾನ ಪಡೆದರು. ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಮೇಶ್ ಬಿರಾದಾರ್, ದಿನೇಶ್ ಆರ್. ವಾನಖೆಡೆ, ಪುಂಡಲೀಕ್ ಹಾಗೂ ಅಜಯ್ ರಾಂಪುರೆ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.






