ಬಸವಕಲ್ಯಾಣದ ಆರೆಸ್ಸೆಸ್ ಪಥ ಸಂಚಲನದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಭಾಗಿ; ವಿಡಿಯೋ ವೈರಲ್

ಬೀದರ್ : ಬಸವಕಲ್ಯಾಣದಲ್ಲಿ ನಡೆದ ಆರೆಸ್ಸೆಸ್ ಪಥ ಸಂಚಲನದಲ್ಲಿ ಕಲಬುರಗಿ ಜಿಲ್ಲೆಯ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಮಹೇಶ್ ಪಾಟೀಲ್ ಅವರು ಗಣವೇಶ ಧರಿಸಿ ಭಾಗವಹಿಸಿದ ವಿಡಿಯೋ ವೈರಲ್ ಆಗಿದೆ.
ಇತ್ತೀಚಿಗೆ ಬಸವಕಲ್ಯಾಣ ನಗರದಲ್ಲಿ ಆರೆಸ್ಸೆಸ್ ನ 100ನೇ ವರ್ಷದ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ಪಥಸಂಚಲನ ನಡೆಸಲಾಗಿತ್ತು. ಆ ಪಥ ಸಂಚಲನದಲ್ಲಿ ನೂರಾರು ಆರೆಸ್ಸೆಸ್ ಕಾರ್ಯಕರ್ತರು ಭಾಗವಹಿಸಿದ್ದರು. ಪಥ ಸಂಚಲನವು ನಗರದ ಪ್ರಮುಖ ರಸ್ತೆಗಳಲ್ಲಿ ನಡೆಸಲಾಗಿತ್ತು.
ಇಲ್ಲಿ ನಡೆದ ಪಥ ಸಂಚಲನದಲ್ಲಿ ಕಲಬುರಗಿ ಜಿಲ್ಲೆಯ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಮಹೇಶ್ ಪಾಟೀಲ್ ಅವರು ಭಾಗವಹಿಸಿದ ವಿಡಿಯೋ ವೈರಲ್ ಆಗಿದೆ.
Next Story





