ಔರಾದ್ | ಅನುಭವ ಮಂಟಪದಲ್ಲಿ ವಚನ ಸ್ಪರ್ಧೆ

ಔರಾದ್ : ಪಟ್ಟಣ ಅನುಭವ ಮಂಟಪದಲ್ಲಿ ಶ್ರಾವಣ ಮಾಸ, ಲಿಂಗೈಕ್ಯ ಶಂತಪ್ಪ ಘೂಳೆ ಅವರ ಸ್ಮರಣಾರ್ಥ ನಿಮಿತ್ತ ವಚನಗಳ ಕಂಠಪಾಠ ಸ್ಪರ್ಧೆ ಕಾರ್ಯಕ್ರಮ ನಡೆಯಿತು.
ಸ್ಪರ್ಧೆಯಲ್ಲಿ ಪಟ್ಟಣ ಸೇರಿದಂತೆ ಎಕಲಾರ್, ಬೋರಾಳ ಹಾಗೂ ಸುತ್ತಮುತ್ತಲಿನ ಮಕ್ಕಳು ಪಾಲ್ಗೊಂಡು ವಚನ ಹೇಳುವ ಮೂಲಕ ಗಮನ ಸೆಳೆದರು.
ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಈ ವಚನ ಸ್ಪರ್ಧೆ ಹಮ್ಮಿಕೊಂಡಿದ್ದು, ಶರಣರ ವಚನಗಳು ಎಲ್ಲೆಡೆ ಪ್ರಚಾರವಾಗಲಿ ಹಾಗೂ ಮಕ್ಕಳಿಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಪ್ರತಿ ವರ್ಷ ವಚನ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ. ಸ್ಪರ್ಧೆಯಲ್ಲಿ ಊಹೆಗೆ ಮೀರಿದಂತೆ ಮಕ್ಕಳು ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದು ಆಯೋಜಕ ಚಂದ್ರಕಾಂತ್ ಘೂಳೆ ಅವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಶಿಕ್ಷಕ ಮಹಾದೇವ ಘೂಳೆ ಅವರು ಮಾತನಾಡಿದರು.
ವಚನ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು. ವಿಜೇತ ವಿದ್ಯಾರ್ಥಿಗಳನ್ನು ಆ.26 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ನೀಡುವ ಮೂಲಕ ಸತ್ಕರಿಸಲಾಗುತ್ತದೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಅಮೃತರಾವ್ ಬಿರಾದಾರ್, ಕಲ್ಯಾಣರಾವ್ ಶೆಂಬೆಳ್ಳಿ, ಜಗನ್ನಾಥ್ ದೇಶಮುಖ, ಸತೀಶ ಮಜಿಗೆ, ಪ್ರಭುರಾವ್ ಬಾಳೂರೆ, ಉದ್ಯಮಿ ನಾಗನಾಥ್ ಕಾಡೋದೆ, ನಾಗನಾಥ್ ಅಣದೂರೆ ಹಾಗೂ ಆಶಾ ಪಸರಗೆ ಸೇರಿದಂತೆ ಸುಮಾರು 75ಕ್ಕೂ ಹೆಚ್ಚು ಮಕ್ಕಳು ಉಪಸ್ಥಿತರಿದ್ದರು.







