ಔರಾದ್| ಗುಡುಗು ಸಹಿತ ಭಾರೀ ಮಳೆ: ಮನೆಗೆ ಹಾನಿ

ಔರಾದ್ : ತಾಲೂಕಿನಲ್ಲಿ ಮಂಗಳವಾರ ಸಾಯಂಕಾಲ ಬಿರುಗಾಳಿ, ಗುಡುಗು ಸಹಿತವಾಗಿ ಭಾರಿ ಮಳೆಯಾಗಿದ್ದು, ಗಡಿಕುಶನೂರ್ ಗ್ರಾಮದಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದು ಎಮ್ಮೆಯೊಂದು ಮೃತಪಟ್ಟಿದೆ.
ಗಡಿಕುಶನೂರ್ ಗ್ರಾಮದಲ್ಲಿ ಸುಂಟರಗಾಳಿಗೆ ಬೃಹತ್ ಆಕಾರದ ಮರವೊಂದು ಧರೆಗುರುಳಿ ಬಿದ್ದಿದ್ದು, ಅದರ ಅಡಿಯಲ್ಲಿ ಸಿಲುಕಿ ಹುಸೇನ್ ಸಾಬ್ ಎನ್ನುವವರಿಗೆ ಸೇರಿದ ಎಮ್ಮೆ ಮೃತಪಟ್ಟಿದೆ.
ಕೌಠಾ (ಕೆ) ಗ್ರಾಮದ ವೈಜಿನಾಥ್ ಎನ್ನುವವರ ಮನೆಯ ಮೇಲ್ಚಾವಣಿ ತಗಡುಗಳು ಬಿರುಗಾಳಿಗೆ ಹಾರಿ ಹೋಗಿದ್ದು, ಮನೆಯ ಒಳಗೆ ಮಳೆಯ ನೀರು ತುಂಬಿದೆ. ಇದರಿಂದಾಗಿ ಮನೆಯಲ್ಲಿನ ಕೆಲ ವಸ್ತುಗಳು ಹಾನಿಯಾಗಿವೆ ಎಂದು ತಿಳಿದು ಬಂದಿದೆ.
Next Story




