ಔರಾದ್ | ಮುದ್ರಣ ಮಾದ್ಯಮದ ಮೇಲೆ ಈಗಲೂ ಜನ ವಿಶ್ವಾಸ ಉಳಿಸಿಕೊಂಡಿದ್ದಾರೆ : ದೇವಯ್ಯ ಗುತ್ತೇದಾರ್

ಔರಾದ್ : ಸಾಮಾಜಿಕ ಜಾಲತಾಣದ ವ್ಯಾಪಕ ಬಳಕೆಯ ನಡುವೆಯೂ ಮುದ್ರಣ ಮಾದ್ಯಮದ ಮೇಲೆ ಈಗಲೂ ಜನ ವಿಶ್ವಾಸ ಉಳಿಸಿಕೊಂಡಿದ್ದಾರೆ ಎಂದು ಕಲಬುರಗಿ ಆವೃತಿಯ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ದೇವಯ್ಯ ಗುತ್ತೇದಾರ್ ಹೇಳಿದರು.
ಇಂದು ಔರಾದ್ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಏರ್ಪಡಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಮುದ್ರಣ ಮಾದ್ಯಮದಲ್ಲಿ ಬಂದ ವರದಿಗಳು ಜನ ನಂಬುತ್ತಾರೆ. ಏಕೆಂದರೆ ಇಲ್ಲಿ ಬರುವ ವರದಿಗಳು ಜವಾಬ್ದಾರಿಯಿಂದ ಹಾಗೂ ವಾಸ್ತವಿಕತೆಯಿಂದ ಕೂಡಿರುತ್ತವೆ. ಸುಪ್ರೀಂ ಕೋರ್ಟ್ ಕುಡಾ ಮುದ್ರಣ ಮಾದ್ಯಮದ ಮೇಲೆ ವಿಶ್ವಾಸ ಇಟ್ಟಿಕೊಂಡಿರುವುದಕ್ಕೆ ಅನೇಕ ಉದಾರಣೆಗಳಿವೆ ಎಂದು ವಿವರಿಸಿದರು.
ಇಂದು ಪತ್ರಿಕೋದ್ಯಮದಲ್ಲಿ ಸಾಕಷ್ಟು ಅವಕಾಶಗಳಿವೆ. ಆದರೆ ಇದಕ್ಕಾಗಿ ಸಾಕಷ್ಟು ಜ್ಞಾನ ಬೇಕಾಗುತ್ತದೆ. ಪತ್ರಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಮಾಜ ಅವರಿಗೆ ಗೌರವ ಕೊಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸಾನಿಧ್ಯ ವಹಿಸಿದ್ದರು. ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಡಿಕೆ ಗಣಪತಿ, ತಹಸೀಲ್ದಾರ್ ಮಹೇಶ್ ಪಾಟೀಲ್, ಸಂಘದ ಉಪಾಧ್ಯಕ್ಷ ನಾಗಶೇಟ್ಟಿ ಧರಂಪೂರೆ, ತಾಲೂಕು ಅಧ್ಯಕ್ಷ ಶಿವಾನಂದ್ ಮೊಕ್ತೇದಾರ್, ಪಪಂ ಅಧ್ಯಕ್ಷೆ ಸರುಬಾಯಿ ಘೂಳೆ, ತಾಪಂ ಇಒ ಶಿವಕುಮಾರ್ ಘಾಟೆ, ಜಿಲ್ಲಾ ಕಾರ್ಯದರ್ಶಿ ಪೃಥ್ವಿರಾಜ್ ಎಸ್, ಹಿರಿಯ ಪತ್ರಕರ್ತ ವಿಜಯಕುಮಾರ್ ಬೆಲ್ದೆ, ತಾಲೂಕು ಪ್ರಧಾನ ಕಾರ್ಯದರ್ಶಿ ಸುನಿಲ್ ಜಿರೋಬೆ, ಪತ್ರಕರ್ತರಾದ ಚನ್ನಬಸವ ಮೊಕ್ತೆದಾರ್, ಅನಿಲ್ ದೇಶಮುಖ್, ಅಮರೇಶ್ವರ್ ಚಿದ್ರೆ, ಬಾಲಾಜಿ ಕುಂಬಾರ್, ಸುಧೀರ್ ಪಾಂಡ್ರೆ, ಅಹ್ಮದ್ ಜಂಬಗಿ, ರವಿಕುಮಾರ್ ಮಠಪತಿ, ರಾಚಯ್ಯ ಸ್ವಾಮಿ, ಸೂರ್ಯಕಾಂತ್ ಎಕಲಾರ್, ಶಿವಕುಮಾರ್ ಸಾದುರೆ, ರವಿಕುಮಾರ್ ಶಿಂಧೆ, ವಿನೋದ್ ಚಿದ್ರೆ, ಪ್ರಭುಲಿಂಗ್ ಸ್ವಾಮಿ, ರಾಜಕುಮಾರ್ ಚಾಂಬೊಳೆ ಮನ್ಮಥಪ್ಪ ಸ್ವಾಮಿ, ರಿಯಾಜ್‌ಪಾಶ ಕೊಳ್ಳುರ್, ಅಮರ್ ಸ್ವಾಮಿ, ಮಲ್ಲಪ್ಪ ಗೌಡ ಉಪಸ್ಥಿತರಿದ್ದರು.







