Basavakalyan | ಭ್ರಷ್ಟಾಚಾರ ಆರೋಪ : ಸೂಕ್ತ ಕ್ರಮಕ್ಕೆ ಆಗ್ರಹ

ಬಸವಕಲ್ಯಾಣ : ತಾಲೂಕಿನ ಹಾರಕೂಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೈತರ ಹೆಸರಲ್ಲಿ ಕೃಷಿ ಇಲಾಖೆಯಿಂದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಬಿಎಸ್ಪಿ ಪಕ್ಷದಿಂದ ಮನವಿ ಸಲ್ಲಿಸಲಾಗಿದೆ.
ತಾಲೂಕು ಕೃಷಿ ಸಹಾಯಕ ನಿರ್ದೇಶಕರಿಗೆ ಸೋಮವಾರ ಸಲ್ಲಿಸಿದ ಮನವಿಯಲ್ಲಿ, ಬಸವಕಲ್ಯಾಣ ತಾಲೂಕಿನ ಹಾರಕೂಡ್, ಗದಲೆಗಾಂವ್, ಹತ್ಯಾಳ್, ಸಿರಗಾಪುರ್, ಹತ್ಯಾಳ್ ತಾಂಡಾ ಸೇರಿದಂತೆ ಹಲವು ಗ್ರಾಮಗಳ ರೈತರ ಜಮೀನಿನಲ್ಲಿ ಬಂಡಿಗ್ ಕಾಮಗಾರಿ ಭೊಗಸ್ ಬಿಲ್ಲು ಮಾಡಿ ಹಣ ಲೂಟಿ ಹೊಡೆಯಲಾಗಿದೆ ಎಂದು ಆರೋಪಿಸಲಾಗಿದೆ.
ಈ ಭ್ರಷ್ಟಾಚಾರದಲ್ಲಿ ತೊಡಗಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ, ಅಮಾನತು ಮಾಡುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಬಿಎಸ್ಪಿ ತಾಲೂಕಾಧ್ಯಕ್ಷ ಶಂಕರ್ ಫುಲೆ, ಸಂಯೋಜಕರಾದ ದತ್ತು ಸುಂಠಾಣೆ, ಮಕ್ಬುಲ್ ಸಾಬ್, ಉಪಾಧ್ಯಕ್ಷ ರಮೇಶ್ ರಾಠೋಡ್, ಪ್ರಧಾನ ಕಾರ್ಯದರ್ಶಿ ರವಿ ಉದಾತೆ, ಕಾರ್ಯದರ್ಶಿ ಮಹಾದೇವ್ ಗಾಯಕವಾಡ್, ದಿಲೀಪ್ ಸಿರೋಳೆ, ಪ್ರಶಾಂತ್ ಗುಡ್ಡೆ, ಸಾಗರ್, ಮಾರುತಿ ಮೇಕಲೆ ಹಾಗೂ ರಾಹುಲ್ ವಾಗಮಾರೆ ಇನ್ನಿತರರು ಉಪಸ್ಥಿತರಿದ್ದರು.




