ಬಸವಕಲ್ಯಾಣ | ಜ.8ರಂದು ʼನಿಮ್ಮ ಸಂವಿಧಾನ ತಿಳಿದುಕೊಳ್ಳಿʼ ಜಾಗೃತಿ ಕಾರ್ಯಕ್ರಮ

ಬಸವಕಲ್ಯಾಣ : ನಾಳೆ (ಜ.8) ಬಸವಕಲ್ಯಾಣದ ಹರಳಯ್ಯ ವೃತ್ತದಲ್ಲಿರುವ ಬ್ರೈಟ್ ಫ್ಯೂಚರ್ ಅಕಾಡೆಮಿಯಲ್ಲಿ ಮಧ್ಯಾಹ್ನ 2 ಗಂಟೆಯಿಂದ 'ನಿಮ್ಮ ಸಂವಿಧಾನ ತಿಳಿದುಕೊಳ್ಳಿ-ಒಂದು ಜಾಗೃತಿ ಕಾರ್ಯಕ್ರಮ' ನಡೆಯಲಿದೆ ಎಂದು ಉಪನ್ಯಾಸಕ ಹಾಗೂ ಸಮಾಜ ಸೇವಕ ನಿತ್ಯಾನಂದ್ ಮಂಠಾಳಕರ್ ಅವರು ತಿಳಿಸಿದರು.
ನಗರದ ಬ್ರೈಟ್ ಫ್ಯೂಚರ್ ಅಕಾಡೆಮಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಅವಿರಾಜ್ ಮಂಠಾಳಕರ್ ಫೌಂಡೇಶನ್ ಹಾಗೂ ನಿತ್ಯಾನಂದ್ ಮಂಠಾಳಕರ್ ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಸಂವಿಧಾನದ ಸಮಾನತೆಯ ಹಕ್ಕುಗಳ ಕಲಂಗಳಾದ 14 ರಿಂದ 18 ಮತ್ತು ಸ್ವಾತಂತ್ರ್ಯದ ಹಕ್ಕುಗಳ ಕಲಂಗಳಾದ 19 ರಿಂದ 22 ರ ಮೇಲೆ ಸವಿಸ್ತಾರವಾದ ಮಾಹಿತಿ ಮತ್ತು ಸಂವಾದ ನಡೆಯಲಿದೆ ಎಂದರು.
ಈ ಕಾರ್ಯಕ್ರಮದ ಉಪನ್ಯಾಸವನ್ನು ವಕೀಲ, ವಾಗ್ಮಿ ಶಿವರುದ್ರ ಕಾಂಬಳೆ ಅವರು ನಡೆಸಿಕೊಡಲಿದ್ದು, ಬಸವಕಲ್ಯಾಣದ ಮಹಾ ಜನತೆ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿಕಂದರ್ ಶಿಂಧೆ, ಗೌತಮ್ ಜ್ಯಾಂತೆ, ಅಭಿಮನ್ಯು ಬಿರಾದಾರ್, ಪೀಂಟು ಕಾಂಬಳೆ ಹಾಗೂ ಸಂದೀಪ್ ಕೋಟಿ, ಬ್ಲಾಕ್ ಕಾಂಗ್ರೆಸ್ ನ ಪರಿಶಿಷ್ಟ ಪಂಗಡ ವಿಭಾಗದ ತಾಲೂಕಾಧ್ಯಕ್ಷ ನಾಗನಾಥ್ ಮೇತ್ರೆ, ಉಜ್ವಲ್ ಸೂರ್ಯವಂಶಿ, ಜಗದೀಶ್ ನೆಲ್ವಾಡಕರ್, ರಾಹುಲ್ ತುತಾರೆ, ಗೌತಮ್ ಕಾಂಬಳೆ ಹಾಗೂ ಶರಣಪ್ಪಾ ಹಡಪದ ಸೇರಿದಂತೆ ಪ್ರಮುಖರು ಗಣ್ಯರು ಉಪಸ್ಥಿತರಿದ್ದರು.







