ಬಸವಕಲ್ಯಾಣ | ಖಾಸಗಿ ಬಸ್ ಢಿಕ್ಕಿ : ಉತ್ತರ ಪ್ರದೇಶದ ಮೂಲದ ಕಾರ್ಮಿಕ ಮೃತ್ಯು

ಸಾಂದರ್ಭಿಕ ಚಿತ್ರ
ಬಸವಕಲ್ಯಾಣ : ರಸ್ತೆ ದಾಟುತಿದ್ದ ಕಾರ್ಮಿಕನೊಬ್ಬನಿಗೆ ಖಾಸಗಿ ಬಸ್ ಢಿಕ್ಕಿಯಾಗಿದ ಪರಿಣಾಮ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹಣಮಂತವಾಡಿ (ಆರ್) ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-65ರ ಮೇಲೆ ಶುಕ್ರವಾರ ಸಂಜೆ ನಡೆದಿದೆ.
ಉತ್ತರ ಪ್ರದೇಶದ ಬುದಾಯು ಜಿಲ್ಲೆಯ ಕಕರಾಲ್ ಗ್ರಾಮದ ನಿವಾಸಿ ನರೇಶ್ ರಾಮಪಾಲ್ (50) ಮೃತಪಟ್ಟ ಕಾರ್ಮಿಕನಾಗಿದ್ದಾನೆ.
ರಾಜೇಶ್ವರ್ ಬಳಿಯ ಕಬ್ಬನಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ನರೇಶ್ ಹೆದ್ದಾರಿ-65ರ ಮೇಲೆ ರಸ್ತೆ ದಾಟುವಾಗ ಬಸವಕಲ್ಯಾಣ ನಗರದಿಂದ ಬೆಂಗಳೂರಿಗೆ ತೆರಳುತಿದ್ದ ಖಾಸಗಿ ಬಸ್ ಢಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
Next Story





