ಬಸವ ಕಲ್ಯಾಣ | ಆಟವಾಡುತ್ತಿದ್ದ ಮಕ್ಕಳ ಮೆಲೆ ಬೀದಿನಾಯಿಗಳ ದಾಳಿ : ಗಂಭೀರ ಗಾಯ

ಬೀದರ್: ಆಟವಾಡುತ್ತಿದ್ದ ಮಕ್ಕಳ ಮೆಲೆ ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿರುವ ಘಟನೆ ಬಸವ ಕಲ್ಯಾಣ ನಗರದ ವಾರ್ಡ್ ನಂಬರ್ 29 ಹಾಗೂ 30ರ ನಡುವೆ ಇರುವ ಚಾವುಸ್ ಗಲ್ಲಿಯಲ್ಲಿ ಶನಿವಾರ ಸಂಜೆ ನಡೆದಿದೆ.
ಸಂಜೆಯ ವೇಳೆ ರಸ್ತೆಯಲ್ಲಿ ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ಬೀದಿ ನಾಯಿಗಳು ಹಠಾತ್ ದಾಳಿ ಮಾಡಿ ಗಂಭೀರ ಗಾಯಗೊಳಿಸಿವೆ. ಗಾಯಗೊಂಡ ಮಕ್ಕಳನ್ನು ಬಸವಕವಲ್ಯಾಣ ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ನಾಯಿಗಳು ಏಕಾಏಕಿ ದಾಳಿ ಮಾಡಿರುವ ದೃಶ್ಯ ಪಕ್ಕದ ಸಿಸಿಟಿವಿಯಲ್ಲಿ ಸೆರೆಯಾಗಿದೆ
ಈ ಘಟನೆಯಿಂದ ಸಾರ್ವಜನಿಕರ ವಲಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ನಗರದಲ್ಲಿ ನಾಯಿಗಳು ಹಾವಳಿ ತಡೆಗಟ್ಟುವಂತೆ ನಗರಸಭೆಯವರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮಾತು ಕೇಳಿ ಬರುತ್ತಿದೆ.
Next Story





