Basavakalyan | ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

ಬಸವಕಲ್ಯಾಣ : ಡಾ.ಅಂಬೇಡ್ಕರ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚಿಗೆ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ನಗರದ ಬಸವ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ದಿ.ನರಸಿಂಗರಾವ್ ಕಾಂಬಳೆ ಅವರ ಜನ್ಮದಿನಾಚರಣೆ ನಿಮಿತ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅತ್ತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಅವಟಿ ಶೇ.92.17, ಭೂಮಿಕಾ 91.50, ಅನುರಾಧಾ 87.33, ಆದಿತ್ಯ ಗಾಯಕವಾಡ್ ಶೇ.82.83, ಸೃಷ್ಠಿ ಶೇ. 79.83, ನಿಕಿತಾ ಸಿಂಗೆ ಶೇ. 77.50 ವಿದ್ಯಾರ್ಥಿಗಳಿಗೆ ಭಾರತೀಯ ದಲಿತ ಪ್ಯಾಂಥರ್ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅರ್ಬನ್ ಯುಥ್ ಕ್ಲಬ್‌ನ ಅಧ್ಯಕ್ಷ ರವೀಂದ್ರ ಗಾಯಕವಾಡ್ ಅವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ.ಜೈಶೇನ್ ಪ್ರಸಾದ್, ಉಪನ್ಯಾಸಕರಾದ ಶ್ರೀಧರ್ ಛಲವಾದಿ, ಶೇಖ್ ಸೈಫಾನ್, ವಿಜಯಕುಮಾರ್ ರಾಯಪಳ್ಳೆ, ಸತೀಷ್ ಕಾಂಬಳೆ, ವಿಲಾಸ್ ಜಾಧವ್, ಶ್ರೀನಿವಾಸ್ ಫುಲೆ, ಶಿಲ್ಪಾ ಕಾಲೇಬಾಗ್, ದೀಪಕ್ ಮೋರೆ, ಭಾಗ್ಯವಂತ್ ದಾದೆ, ಬಸವರಾಜ್, ದೇವಿಂದ್ರ ಗಜರೆ, ಜೈಭೀಮ್ ಕೋಲೆ, ವಿದ್ಯಾರ್ಥಿಗಳಾದ ವಿನಿತ್, ಸಿದ್ಧಾರ್ಥ ಹಾಗೂ ಭಾಸ್ಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.




