Basavakalyan | ವಿದ್ಯುತ್ ತಗುಲಿ ಯುವಕ ಮೃತ್ಯು

ಅಮಿತ್
ಬಸವಕಲ್ಯಾಣ: ವಿದ್ಯುತ್ ತಗುಲಿ ಯುವಕನೊರ್ವ ಮೃತಪಟ್ಟ ಘಟನೆ ತಾಲೂಕಿನ ಚಂಡಕಾಪುರ ಗ್ರಾಮದ ಸಮೀಪದ ಪೆಟ್ರೋಲ್ ಬಂಕ್ ಬಳಿ ಶುಕ್ರವಾರ ಸಂಭವಿಸಿದೆ.
ಮೃತರನ್ನು ಮಂಠಾಳ್ ಗ್ರಾಮದ ಅಮಿತ್ (19) ಎಂದು ಗುರುತಿಸಲಾಗಿದೆ.
ಅಮಿತ್ ಚಂಡಕಾಪುರ ಗ್ರಾಮದ ಸಮೀಪದ ಸಾಯಿ ಸಂಗಮ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕುವ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಶುಕ್ರವಾರ ಪೆಟ್ರೋಲ್ ಬಂಕ್ ಮಾಲಕ ಅನಿಲ್ ರಗಟೆ ಹಾಗೂ ಕೃಷ್ಣ ಪಾಟೀಲ ಅವರ ಸೂಚನೆಯಂತೆ ಬಂಕ್ನ ಮ್ಯಾನೇಜರ್ ವಿಶ್ವನಾಥ್ ಅವರು ಅಮಿತ್ನನ್ನು ಪೆಟ್ರೋಲ್ ಹಾಕುವ ಕೆಲಸದಿಂದ ಬಿಡಿಸಿ, ಕಟ್ಟಡದ ಮೇಲಿದ್ದ ಸೋಲಾರ್ ಪ್ಯಾನೆಲ್ಗಳನ್ನು ಸರಿಪಡಿಸುವ ಕೆಲಸಕ್ಕೆ ಹಚ್ಚಿದ್ದರು ಎನ್ನಲಾಗಿದೆ. ಈ ವೇಳೆ ಅಮಿತ್ಗೆ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Next Story




