ಬಸವಕಲ್ಯಾಣ | ಕಾರು-ಲಾರಿ ನಡುವೆ ಢಿಕ್ಕಿ: ಚಾಲಕ ಮೃತ್ಯು

ಬೀದರ್: ಕಾರು ಮತ್ತು ಲಾರಿ ನಡುವೆ ಢೀಕ್ಕಿ ಸಂಭವಿಸಿ ಕಾರು ಚಾಲಕ ಮೃತಪಟ್ಟ ಘಟನೆ ಬಸವಕಲ್ಯಾಣ ತಾಲೂಕಿನ ತಾಡೋಳಾ ಗ್ರಾಮ ಸಮಿಪದ ರಾಷ್ಟ್ರೀಯ ಹೆದ್ದಾರಿ 65ರ ಬಳಿ ಸೋಮವಾರ ನಡೆದಿದೆ.
ಜಾಫರ್ ವಾಡಿ ಗ್ರಾಮದ ನಿವಾಸಿ ಶಿವಕುಮಾರ್ (30) ಅಪಘಾತದಲ್ಲಿ ಮೃತಪಟ್ಟ ಯುವಕ.
ಹುಮನಾಬಾದ್ ನಿಂದ ಬಸವಕವಲ್ಯಾಣದ ಕಡೆ ಬರುತ್ತಿದ್ದ ಕಾರಿಗೆ ಬಸವಕಲ್ಯಾಣದಿಂದ ಹುಮನಾಬಾದ್ ಗೆ ವಿರುದ್ಧ ಧಿಕ್ಕಿನಲ್ಲಿ ಬರುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರು ಚಾಲಕ ಶಿವಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ತಿಳಿದು ಬಸವಕವಲ್ಯಾಣ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಶರಣು ಸಲಗರ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಈ ಕುರಿತು ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




