ಭಾಲ್ಕಿ | ಕಬ್ಬಿನ ಹೊಲಕ್ಕೆ ಬೆಂಕಿ

ಭಾಲ್ಕಿ : ತಾಲೂಕಿನ ಬೀರಿ (ಬಿ) ಗ್ರಾಮದ ರೈತ ನರಸಿಂಗ್ ಬಿರಾದಾರ್ ಹಾಗೂ ರಾಜಕುಮಾರ್ ಬಿರಾದಾರ್ ಅವರ ಹೊಲದಲ್ಲಿ ಬೆಳೆದ ಕಬ್ಬಿಗೆ ಬುಧವಾರ ಮಧ್ಯಾಹ್ನ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿದ್ದು, ಕಬ್ಬು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ರೈತ ನರಸಿಂಗ್ ಬಿರಾದಾರ್ ಅವರು ಬೆಳೆದ 2.5 ಎಕರೆ ಕಟಾವಿಗೆ ಬಂದ ಕಬ್ಬು ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿಗಾಹುತಿಯಾಗಿದೆ.
ಇದೇ ರೀತಿ ಬೀರಿ(ಬಿ) ಗ್ರಾಮದ ರಾಜಕುಮಾರ್ ಬಿರಾದಾರ್ ಅವರ ಜಮೀನಿನಲ್ಲಿ ಬೆಳೆದ 1 ಎಕರೆ ಕಬ್ಬು ಸುಟ್ಟು ಭಸ್ಮವಾಗಿದೆ.
ಘಟನೆಯಿಂದ ಇಬ್ಬರು ರೈತರು ಕಂಗಾಲಾಗಿದ್ದು, ಸರಕಾರ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
Next Story




