ಬೀದರ್ | ಕಾರು-ಲಾರಿ ಢಿಕ್ಕಿ : ಓರ್ವ ಸ್ಥಳದಲ್ಲೇ ಮೃತ್ಯು, ಮೂವರಿಗೆ ಗಂಭೀರ ಗಾಯ
ಬೀದರ್ : ರಸ್ತೆಯಲ್ಲಿ ತಿರುವು ಪಡೆಯುತಿದ್ದ ಭಾರೀ ಗಾತ್ರದ ಲಾರಿಗೆ ಕಾರು ಢಿಕ್ಕಿಯಾಗಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟುದ್ದು, ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಬಸವಕಲ್ಯಾಣ ತಾಲೂಕಿನ ಹೆದ್ದಾರಿ-65ರ ಅತಲಾಪೂರ ಗ್ರಾಮದ ಬಳಿ ನಿನ್ನೆ ತಡರಾತ್ರಿ ನಡೆದಿದೆ.
ಆಳಂದ ತಾಲೂಕಿನ ಮೋರಿಸಾಬ್ ತಾಂಡಾದ ನಿವಾಸಿ ವೈಜುನಾಥ ತುಕಾರಾಮ ರಾಠೋಡ (50) ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಮುನ್ನಳ್ಳಿ ಗ್ರಾಮದ ನಿವಾಸಿ ಸುನೀಲಕುಮಾರ ಗೋಪಾಳೆ ಹಾಗೂ ಆಳಂದ ನಿವಾಸಿಗಳಾದ ಅಬ್ದುಲ್ ಕರೀಮ್ ಮತ್ತು ಮಹೇಬುಬ್ ಸಾಬ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬೀದರ್ ನಿಂದ ಆಳಂದ ಕಡೆಗೆ ತೆರಳುತಿದ್ದ ವೇಳೆ ಸಸ್ತಾಪೂರ ಬಂಗ್ಲಾದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಅತಲಾಪೂರ ಕ್ರಾಸ್ ಬಳಿ ಘಟನೆ ಜರುಗಿದ್ದು, ಸಿಪಿಐ ಅಲಿಸಾಬ್, ಪಿಎಸ್ಐ ಸುಜಾತ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಕುರಿತು ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story