ಪ್ರತಿಯೊಂದು ಹಂತದಲ್ಲಿ ಎಲ್ಲ ಧರ್ಮದವರು ಒಗ್ಗಟ್ಟಾಗಿರುವುದೇ ನಮ್ಮ ದೇಶದ ಶಕ್ತಿ : ಸ್ಪೀಕರ್ ಯು.ಟಿ.ಖಾದರ್

ಯು.ಟಿ.ಖಾದರ್
ಬೀದರ್ : ಪ್ರತಿಯೊಂದು ಹಂತದಲ್ಲಿ ನಾವೆಲ್ಲ ಧರ್ಮದವರು ಒಗ್ಗಟ್ಟಾಗಿರುವುದೇ ನಮ್ಮ ದೇಶದ ಶಕ್ತಿಯಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ಹೇಳಿದ್ದಾರೆ.
ಗುರುವಾರ ನಗರಕ್ಕೆ ಆಗಮಿಸಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್ ದಾಳಿಯ ಹಿಂದೆ ಯಾರಿದ್ದಾರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅವರನ್ನು ಮಟ್ಟ ಹಾಕುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು. ದೇಶದ ಜನರು ಮೋದಿ ಅವರಿಂದ ಇದನ್ನೇ ಅಪೇಕ್ಷೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದಾಳಿಗೊಳಗಾದ ಜನರಷ್ಟೇ ಇಲ್ಲ, ಇಡೀ ದೇಶದ ಜನರಿಗೆ ನ್ಯಾಯ ಕೊಡುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು. ವಿವಿಧತೆಯಲ್ಲಿ ಏಕತೆಯಿಂದ ಕೂಡಿರುವ ದೇಶ ಭಾರತವಾಗಿದೆ. ಸೌಹಾರ್ದತೆಯನ್ನು ಕದಡುವುದು, ದೇಶ ದುರ್ಬಲಗೊಳಿಸುವುದು ಭಯೋತ್ಪಾದಕ ಕೃತ್ಯದ ಉದ್ದೇಶವಾಗಿದೆ ಎಂದರು.
ವಿವಿಧತೆಯಲ್ಲಿ ಏಕತೆ ಮಾಡುವುದು ಭಾರತ ದೇಶದ ಶಕ್ತಿಯಾಗಿದೆ. ಆದರೆ, ಅದನ್ನು ಛಿದ್ರಗೊಳಸಿಸುವುದು ಭಯೋತ್ಪಾದಕರ ಉದ್ದೇಶ. ನಾವೆಲ್ಲರೂ ಒಗ್ಗಟ್ಟಾಗಿ, ಪ್ರೀತಿಯಿಂದ ಇರಬೇಕು ಎಂದು ನಾನು ಬಯಸುತ್ತೇನೆ. ಈ ಒಗ್ಗಟ್ಟು ಮತ್ತು ಪ್ರೀತಿಯೇ ನಮ್ಮ ಶಕ್ತಿಯಾಗಿದೆ. ನಾನು ಒಬ್ಬ ದೇಶದ ಪ್ರಜೆ, ಈ ಘಟನೆ ನಾನು ಖಂಡಿಸುತ್ತೇನೆ ಎಂದು ಹೇಳಿದರು.





