ಬೀದರ್ | ದಿನಾಲೂ ಭಾರತ ಸಂವಿಧಾನದ ಪೀಠಿಕೆಯನ್ನು ಶಾಲೆಯಲ್ಲಿ ಓದಿಸಬೇಕು ಎಂಬ ಸುತ್ತೋಲೆ ಪಾಲನೆ ಮಾಡಿ : ಘಾಳೆಪ್ಪಾ ಲಾಧಾಕರ್

ಬೀದರ್ : ದಿನಾಲೂ ಭಾರತ ಸಂವಿಧಾನದ ಪೀಠಿಕೆಯನ್ನು ಶಾಲೆಯಲ್ಲಿ ಓದಿಸಬೇಕು ಎಂಬ ಸರ್ಕಾರದ ಸುತ್ತೋಲೆಯನ್ನು ಪಾಲನೆ ಮಾಡಬೇಕು ಎಂದು ಭೀಮ್ ಆರ್ಮಿಯ ಗೌರವ ಜಿಲ್ಲಾ ಅಧ್ಯಕ್ಷ ಘಾಳೆಪ್ಪಾ ಲಾಧಾಕರ್ ಅವರು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ವಿದ್ಯಾರ್ಥಿಗಳು ಪ್ರತಿದಿನ ಶಾಲಾ ಪ್ರಾರ್ಥನೆಯ ಸಮಯದಲ್ಲಿ ಸಂವಿಧಾನ ಪೀಠಿಕೆ ಓದಲು, ಪೀಠಿಕೆಯನ್ನು ಎಲ್ಲಾ ಶಾಲೆಗಳಲ್ಲಿ ಪ್ರದರ್ಶಿಸುವಂತೆ ಮತ್ತು ಪೂರಕ ಕಾರ್ಯಕ್ರಮಗಳು ಹಮ್ಮಿಕೊಳ್ಳುವಂತೆ ಕ್ರಮವಹಿಸಲು ಜೂ.3 ರಂದು ಕರ್ನಾಟಕ ಸರ್ಕಾರದ ಕಚೇರಿಯಿಂದ ಸುತ್ತೋಲೆ ಹೊರಡಿಸಲಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರದ ಸುತ್ತೋಲೆಯನ್ನು ಎಲ್ಲ ಶಾಲೆಯವರು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
Next Story





