Bidar | ಗಾಳಿಪಟ ಹಾರಿಸಲು ಹೋಗಿ ಕಟ್ಟಡದ ಮೇಲಿಂದ ಬಿದ್ದು ಯುವಕ ಮೃತ್ಯು

ಬೀದರ್ : ಗಾಳಿಪಟ ಹಾರಿಸಲು ಹೋಗಿ ಕಟ್ಟಡದ ಮೇಲಿಂದ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಹುಮನಾಬಾದ್ ನಗರದ ವಾಂಜರಿ ಬಡಾವಣೆಯಲ್ಲಿ ಶನಿವಾರ ಸಾಯಂಕಾಲ ನಡೆದಿರುವುದು ವರದಿಯಾಗಿದೆ.
ಶಶಿಕುಮಾರ್ (19) ಮೃತಪಟ್ಟ ಯುವಕನಾಗಿದ್ದಾನೆ.
ಹುಮನಾಬಾದ್ ನಗರದ ಖಾಸಗಿ ಕಾಲೇಜೊಂದರ ಕಟ್ಟಡದ ಮೇಲೆ ಶಶಿಕುಮಾರ್ ತನ್ನ ಗೆಳೆಯರೊಂದಿಗೆ ಗಾಳಿಪಟ ಹಾರಿಸಲು ಹೋಗಿದ್ದನು. ಗಾಳಿಪಟ ಹಿಡಿಯಲು ಹೋದಾಗ ಆಯತಪ್ಪಿ ಕಟ್ಟಡದ ಮೇಲಿಂದ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
Next Story





