Bidar | ದೇವರ ದರ್ಶನಕ್ಕೆಂದು ಕರೆದೊಯ್ದು ಪತ್ನಿ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ ಪ್ರಕರಣ : ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತ್ಯು

ಸಾಂದರ್ಭಿಕ ಚಿತ್ರ
ಬೀದರ್ : ದೇವರ ದರ್ಶನಕ್ಕೆಂದು ಕರೆದೊಯ್ದು ಪತಿಯಿಂದ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಭಾಲ್ಕಿ ತಾಲೂಕಿನ ಖಾನಾಪುರದ ಮೈಲಾರ ಮಲ್ಲಣ್ಣ ದೇವಸ್ಥಾನ ಹತ್ತಿರವಿರುವ ಜಗದೇಶ್ವರಿ ಮಠದ ಬಳಿ ಜೂ.25ರ ರಾತ್ರಿ ನಡೆದಿತ್ತು. ಹಲ್ಲೆಗೋಳಗಾದ ಪತ್ನಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ ಮೃತಪಟ್ಟಿದ್ದಾರೆ.
ಸಂಜನಾ (26) ಹಲ್ಲೆಗೊಳಗಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಮಹಿಳೆಯಾಗಿದ್ದು, ಭಾಗವತ್ ಬಿರಾದಾರ್ ಎಂಬಾತ ಹಲ್ಲೆ ಮಾಡಿದ ಆಕೆಯ ಪತಿಯಾಗಿದ್ದಾನೆ.
ಎರಡು ವರ್ಷದ ಹಿಂದೆ ಹೊನ್ನಿಕೇರಿ ಗ್ರಾಮದ ಸಂಜನಾಳಿಗೆ ಭಾಲ್ಕಿ ತಾಲೂಕಿನ ಬೊಳೆಗಾಂವ್ ಗ್ರಾಮದ ನಿವಾಸಿ ಭಾಗವತ್ ಬಿರಾದಾರ್ ಎಂಬಾತನಿಗೆ ಜೊತೆ ಮದುವೆ ಮಾಡಲಾಗಿತ್ತು. ಮದುವೆಯಾದ ಕೆಲವು ತಿಂಗಳು ಇಬ್ಬರೂ ಚೆನ್ನಾಗಿದ್ದರು. ಆದರೆ ನಂತರದಲ್ಲಿ ಭಾಗವತ್ ವಿನಾಕಾರಣ ಸಂಜನಾಳ ಜೊತೆಗೆ ಜಗಳ ಮಾಡುತ್ತಿದ್ದನು ಎನ್ನಲಾಗಿದೆ.
ಘಟನೆಯ ವಿವರ : ಜೂ.25ರಂದು ಭಾಗವತ್, ಸಂಜನಾಳಿಗೆ ದೇವರ ದರ್ಶನಕ್ಕೆಂದು ಭಾಲ್ಕಿ ತಾಲೂಕಿನ ಮೈಲಾರ ಮಲ್ಲಣ್ಣ ದೇವಸ್ಥಾನಕ್ಕೆ ಕರೆದೊಯ್ದಿದ್ದಾನೆ. ಮರಳಿ ಬರುವಾಗ ಜಗದೇಶ್ವರಿ ಮಠದ ಹತ್ತಿರ ಬಂದಾಗ ಸಂಜನಾಳಿಗೆ ಕಬ್ಬಿಣದ ರಾಡ್ ದಿಂದ ತಲೆಗೆ ಹೊಡೆದಿದ್ದನು. ಈ ಹಲ್ಲೆಯಿಂದ ಭಾರೀ ಗಾಯಗೋಳಗಾಗಿದ್ದ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜನಾ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಧನ್ನೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.






