ಬೀದರ್ | 500 ಅಡಿಯ ಕೇಬಲ್ ತಂತಿ ಕಳ್ಳತನ

ಬೀದರ್ : ಭಾಲ್ಕಿ ಮತ್ತು ಭಾತಾಂಬ್ರಾ ನಡುವೆ ಇರುವ ಕುರ್ ಕುರೆ ಕಂಪನಿ ಹಾಗೂ ಅದರ ಹತ್ತಿರ ಇರುವ ಬೋರವೆಲ್ ನಲ್ಲಿನ ಸುಮಾರು 500 ಅಡಿ ಕೇಬಲ್ ತಂತಿ ಕಳ್ಳತನ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಎರಡು ದಿನದ ಹಿಂದೆ ನಮ್ಮ ಬೋರವೆಲ್ ಗೆ ಇರುವ ಕೇಬಲ್ ತಂತಿಯು ಕಳ್ಳತನ ಮಾಡಲಾಗಿತ್ತು. ಅದಾದ ನಂತರ ಗುರುವಾರ ರಾತ್ರಿ ಅದೇ ಬೋರವೆಲ್ ಹತ್ತಿರ ಇರುವ ನಮ್ಮ ಕುರ್ ಕುರೆ ಕಂಪನಿಯಲ್ಲಿನ ಕೇಬಲ್ ತಂತಿ ಕಳ್ಳತನ ಮಾಡಲಾಗಿದೆ ಎಂದು ಮಾಲಕ ದೀಪಕ್ ಅವರು ಹೇಳಿದ್ದಾರೆ.
ಕೆಲ ದಿನಗಳಿಂದ ಕುರ್ ಕುರೆ ಕಂಪನಿ ಬಂದ್ ಮಾಡಲಾಗಿದೆ. ಆದರೆ ಆ ಕಂಪನಿಯಲ್ಲಿ ಲಕ್ಷಾಂತರ ಮೌಲ್ಯದ ಮಷಿನ್ ಹಾಗೂ ಕೇಬಲ್ ತಂತಿ ಇತ್ತು. ಕಳ್ಳರು ಕಂಪನಿಯ ಗೋಡೆ ಒಡೆದು ಕೇಬಲ್ ತಂತಿ ದೋಚಿಕೊಂಡು ಹೋಗಿದ್ದಾರೆ. ಸುಮಾರು 40 ಸಾವಿರ ರೂ. ಮೌಲ್ಯದ 500 ಅಡಿಯಷ್ಟು ಉದ್ದದ ಕೇಬಲ್ ತಂತಿ ದೋಚಿಕೊಂಡು ಹೋಗಿದ್ದಾರೆ. ಇದರ ವಿರುದ್ಧ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Next Story





