ಬೀದರ್ | ಶಾಲಾ ವಾಹನ ಹರಿದು 8 ವರ್ಷದ ಬಾಲಕಿ ಮೃತ್ಯು

ಬೀದರ್ : ಶಾಲಾ ವಾಹನ ಹರಿದು 8 ವರ್ಷದ ಬಾಲಕಿಯೊರ್ವಳು ಮೃತಪಟ್ಟ ಘಟನೆ ಜನವಾಡಾ ಗ್ರಾಮದ ಪೊಲೀಸ್ ಕ್ವಾಟರ್ಸ್ ಬಳಿ ಮಂಗಳವಾರ ಸಾಯಂಕಾಲ ನಡೆದಿದೆ.
ಮೃತಪಟ್ಟ ಬಾಲಕಿಯನ್ನು ಔರಾದ್ ತಾಲೂಕಿನ ಗಡಿಕುಶನೂರ್ ಗ್ರಾಮದ ರುತ್ವಿ (8) ಎಂದು ಗುರುತಿಸಲಾಗಿದೆ.
ಮೃತ ಬಾಲಕಿಯು ಬೀದರ್ ತಾಲೂಕಿನ ಜನಾವಾಡಾ ಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದಳು.
ಮಂಗಳವಾರ ಸಾಯಂಕಾಲ ಶಾಲಾ ವಾಹನದಲ್ಲಿ ಮನೆಗೆ ಬಂದ ಬಾಲಕಿ ಶಾಲಾ ವಾಹನದಿಂದ ಇಳಿದು ಪಕ್ಕದಲ್ಲಿ ನಿಂತಿದ್ದಳು. ಆಕೆ ನಿಂತಿದ್ದನ್ನು ಗಮನಿಸದ ಚಾಲಕ ಆಕೆಯ ಮೇಲೆಯೇ ವಾಹನ ಹರಿಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಜನವಾಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Next Story





