ಬೀದರ್ | ಲೋಕ್ ಅದಾಲತ್ : ಜಿಲ್ಲೆಯಲ್ಲಿ 81,508 ಪ್ರಕರಣಗಳು ಇತ್ಯರ್ಥ ; ನ್ಯಾ.ಪ್ರಕಾಶ್ ಬನಸೊಡೆ

ಬೀದರ್ : ಜಿಲ್ಲಾದ್ಯಂತ ಒಟ್ಟು 81,508 ಪ್ರಕರಣ ಇತ್ಯರ್ಥಗೊಳಿಸಿ ಒಟ್ಟು 26,15,36,335 ರೂ. ಪರಿಹಾರವನ್ನು ಕಕ್ಷಿದಾರರಿಗೆ ಒದಗಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ್ ಬನಸೋಡೆ ಅವರು ತಿಳಿಸಿದರು.
ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನವದೆಹಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ರಾಷ್ಟ್ರೀಯ ಅದಾಲತನ್ನು ಹಮ್ಮಿಕೊಳ್ಳಲು ನಿರ್ದೇಶನ ನೀಡಿದ ಮೇರೆಗೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲೆಯ ಎಲ್ಲಾ ನ್ಯಾಯಲಯಗಳಲ್ಲಿ ಜು.12 ರಂದು ನಡೆಸಿದ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಜಿಲ್ಲೆಯಾದ್ಯಾಂತ ಒಟ್ಟು 81,508 ಪ್ರಕರಣಗಳು ಇತ್ಯರ್ಥಗೊಳಿಸಿ ಒಟ್ಟು 26,15,36,335 ರೂ. ಪರಿಹಾರವನ್ನು ಕಕ್ಷಿದಾರರಿಗೆ ಒದಗಿಸಲಾಗಿದೆ ಎಂದು ಹೇಳಿದರು.
ಈ ಬಾರಿಯ ಲೋಕ್ ಅದಾಲತ್ ನಲ್ಲಿ ಒಟ್ಟು 10,697 ಬಾಕಿ ಇದ್ದ (ಪೆಂಡಿಂಗ್) ಪ್ರಕರಣಗಳು ಇತ್ಯರ್ಥಗೊಳಿಸಲಾಗಿದ್ದು, 11,05,50,484 ರೂ. ಹಣವನ್ನು ಕಕ್ಷಿದಾರರಿಗೆ ವಸೂಲಾತಿ ಮತ್ತು ಪರಿಹಾರ ಒದಗಿಸಲಾಗಿದೆ. ಜಿಲ್ಲೆಯಾದ್ಯಾಂತ ಒಟ್ಟು 70,811 ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥಗೊಳಿಸಲಾಗಿದೆ. ಕಕ್ಷಿದಾರರಿಗೆ 15,09,85,851 ರೂ. ಹಣವನ್ನು ವಸೂಲಾತಿ ಮತ್ತು ಪರಿಹಾರ ಒದಗಿಸಲಾಗಿದೆ ಎಂದರು.
ಜಿಲ್ಲೆಯಾಧ್ಯಂತ ಈ ಲೋಕ್ ಆದಾಲತ್ ನಲ್ಲಿ ವೈವಾಹಿಕ ವ್ಯಾಜ್ಯವನ್ನು ಇತ್ಯರ್ಥಪಡಿಸಿ ಸಂದಾನದ ಮೂಲಕ 3 ಜೋಡಿ ದಂಪತಿಯನ್ನು ರಾಜಿ ಸಂಧಾನದ ಮೂಲಕ ಒಂದು ಮಾಡಲಾಗಿದೆ. ಹಾಗೆಯೇ ನ್ಯಾಯಲಯಗಳಲ್ಲಿ ಬಾಕಿ ಇರುವ ಒಟ್ಟು 7 ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.







