ಬೀದರ್ | ಆರೋಗ್ಯದಿಂದ ಜೀವನ ಸಾಗಿಸಬೇಕಾದರೆ ಉತ್ತಮ ಪರಿಸರದ ಅವಶ್ಯಕತೆ ಇದೆ : ಡಾ.ಕಾಶಿನಾಥ್ ಪಾಟೀಲ್

ಬೀದರ್ : ಮನುಷ್ಯ ಜೀವಿ ಮತ್ತು ಇತರ ಜೀವಿಗಳು ಆರೋಗ್ಯದಿಂದ ನೆಮ್ಮದಿಯಾಗಿ ಜೀವನ ಸಾಗಿಸಬೇಕಾದರೆ ಉತ್ತಮ ಪರಿಸರದ ಅವಶ್ಯಕತೆ ಇದೆ ಎಂದು ಬಾಪು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ.ಕಾಶಿನಾಥ್ ಪಾಟೀಲ್ ಅವರು ತಿಳಿಸಿದರು.
ಮಂಗಳವಾರ ನಗರದ ಡಾ.ತೊಂಟದ ಸಿದ್ಧಲಿಂಗ ಪ್ರೌಢ ಶಾಲೆಯಲ್ಲಿ ಬಾಪು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಡಾ.ತೊಂಟದ ಸಿದ್ಧಲಿಂಗ ಪ್ರೌಢ ಶಾಲೆ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಹಾಗೂ ವೃತ್ತಿಪರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವ್ಯಕ್ತಿಗೆ ಪರಿಶುದ್ಧ ಆಮ್ಲಜನಕ ದೊರೆಯಬೇಕಾದರೆ ಹೆಚ್ಚು ಸಸಿಗಳನ್ನು ನೆಡಬೇಕು. ಅರಣ್ಯ ನಾಶವಾಗದಂತೆ ಮರಗಳನ್ನು ಮಕ್ಕಳಂತೆ ಸಂರಕ್ಷಣೆ ಮಾಡುವ ಹೊಣೆಗಾರಿಕೆ ಯುವ ಜನಾಂಗದವರ ಮೇಲೆ ಇದೆ. ಅದರಂತೆ ಮಕ್ಕಳು ಉತ್ತಮ ಸಂಸ್ಕೃತಿ, ಸಂಸ್ಕಾರ ಪಡೆದುಕೊಂಡು ಗುರುಹಿರಿಯರಿಗೆ ಗೌರವ ಆಧಾರದಿಂದ ಕಾಣಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪರಿಸರ ನಮಗಾಗಿ ಸಂಘದ ಜಿಲ್ಲಾಧ್ಯಕ್ಷ ಆರ್.ಎಸ್. ಬಿರಾದಾರ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಯೋಗ ಶಿಕ್ಷಕಿ ರೂಪಾ, ಪ್ರೊ.ಉಮಾಕಾಂತ್ ಮಿಸೆ, ಶಾಲೆಯ ಸ್ಥಾನಿಕ ಕಮಿಟಿಯ ಅಧ್ಯಕ್ಷ ಸಂಗ್ರಾಮಪ್ಪ ಬಿರಾದಾರ್, ಮುಖ್ಯಗುರು ಸುಧಾ ನಾಯಕ್, ಸೃಷ್ಠಿ, ದಿಲೀಪಕುಮಾರ್ ಹಾಗೂ ಯೋಗಿತಾ ಬಿರಾದಾರ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





