ಬೀದರ್ | ಬೈಕ್ ಮೇಲೆ ಬಿದ್ದ ಕಟ್ಟಿಗೆ ತುಂಬಿದ್ದ ಲಾರಿ : ಸವಾರ ಮೃತ್ಯು

ಬೀದರ್ : ವೇಗವಾಗಿ ಬಂದ ಕಟ್ಟಿಗೆ ತುಂಬಿದ್ದ ಲಾರಿಯೊಂದು ಪಲ್ಟಿಯಾಗಿ ಬೈಕ್ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಹುಮನಾಬಾದ್ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 65 ರಲ್ಲಿ ನಡೆದಿದೆ.
ಹುಮನಾಬಾದ್ ಪಟ್ಟಣದ ಶಿವಪುರ್ ಗಲ್ಲಿಯ ನಿವಾಸಿ ಫಿರೋಜ್ ಅಹ್ಮದ್ (40) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.
ಇಂದು ಸಾಯಂಕಾಲ ಹೈದರಾಬಾದ್ ಕಡೆಯಿಂದ ಕಟ್ಟಿಗೆ ತುಂಬಿದ್ದ ಲಾರಿಯೊಂದು ವೇಗವಾಗಿ ಬಂದು, ಚಾಲಕನ ನಿಯಂತ್ರಣ ತಪ್ಪಿ ಲಾರಿಯಲ್ಲಿನ ಕಟ್ಟಿಗೆಗಳು ಬೈಕ್ ಸವಾರ ಫಿರೋಜ್ ಅಹ್ಮದ್ ಅವರ ಮೇಲೆ ಬಿದ್ದಿವೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಹುಮನಾಬಾದ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





