ಬೀದರ್ | ಔರಾದ್ (ಎಸ್) ಗ್ರಾಮದಲ್ಲಿನ ಅನಿಷ್ಠ ಪದ್ಧತಿಯ ಪಾಲನೆ ತಡೆಯಲು ಮನವಿ

ಬೀದರ್ : ಔರಾದ್ (ಎಸ್) ಗ್ರಾಮದಲ್ಲಿ ಅನಿಷ್ಠ ಪದ್ಧತಿಯ ಕಾರ್ಯ ಪಾಲನೆ ಮಾಡಲಾಗುತ್ತಿದ್ದು, ಇದನ್ನು ತಡೆಯಬೇಕು ಎಂದು ಬಹುಜನ ಸಮಾಜ ಪಕ್ಷವು ಬಗದಲ್ ಪೊಲೀಸ್ ಠಾಣೆಯ ಪಿಎಸ್ಐ ಅವರಿಗೆ ಮನವಿ ಸಲ್ಲಿಸಿದೆ.
ಇಂದು ಬಗದಲ್ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ಮನವಿಪತ್ರದಲ್ಲಿ, ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಬರುವ ಔದಾದ್ (ಎಸ್) ಗ್ರಾಮದಲ್ಲಿ ಊರ ಹಬ್ಬ ಅಥವಾ ಮಹಾಲಕ್ಷ್ಮಿ ಜಾತ್ರೆ ಮಹೋತ್ಸವದ ಹೆಸರಲ್ಲಿ ಅನೇಕ ಪ್ರಾಣಿಗಳಿಗೆ ಬಲಿ ಕೋಡುತ್ತಿದ್ದಾರೆ. ಇದರಲ್ಲಿ ದಲಿತ ಸಮುದಾಯದ ಜನರಿಗೆ ಜಾಣಿ, ಪೋತೆಯರನ್ನಾಗಿ ಮಾಡಿ ವಿಚಿತ್ರ ವೇಷ ಧರಿಸಿ ಕುಣಿಸುತ್ತಿದ್ದಾರೆ. ಜಾಣೆ, ಪೋತೆಯರ ಕೈಯಿಂದ ಕೋಣ ಮತ್ತು ಕುರಿಗಳನ್ನು ಕಡಿದು ವಿಕೃತ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಇದು ಅಸ್ಪೃಶ್ಯತೆಯ ಮುಂದುವರೆಸಿಕೊಂಡು ಹೋಗುವ ಹಬ್ಬವಾಗಿದೆ. ನಾವು ಮಹಾಲಕ್ಷ್ಮೀ ಜಾತ್ರೆಯ ವಿರೊಧಿಗಳ್ಳಲ್ಲ. ನಾವು ಅಸ್ಪೃಶ್ಯತೆಯ ವಿರೋಧಿಗಲಾಗಿದ್ದೇವೆ ಎಂದು ತಿಳಿಸಿದ್ದಾರೆ.
ದೇಶ 76ನೇ ಗಣರಾಜ್ಯೋತ್ಸವ ಆಚರಣೆ ಒಂದು ಕಡೆಯಾದರೆ ಇಂತಹ ವ್ಯವಸ್ಥಿತ ಮೂಢನಂಬಿಕೆ ಆಚರಣೆಯಿಂದ ಇಡೀ ದೇಶದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರಲಾಗುತ್ತಿದೆ. ಸರ್ಕಾರ ಇಂತಹ ಅನಿಷ್ಠ ಪದ್ಧತಿ ಕೂಡಲೇ ಸ್ಥಗಿತಗೋಳಿಸಬೇಕು. ಫೆ. 9 ರಿಂದ 12 ರವರೆಗೆ ಔರಾದ್ (ಎಸ್) ಗ್ರಾಮದ ಹನುಮಾನ ಮಂದಿರದ ಎದುರುಗಡೆ ಇರುವ ಮಹಾಲಕ್ಷ್ಮೀ ದೇವರೆಯ ಪ್ರಾಂಗಣದಲ್ಲಿ ಪೋಲಿಸ್ ಸಿಬ್ಬಂದಿ ನಿಯೋಜಿಸಿ ಗ್ರಾಮದಲ್ಲಿ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಕಪಿಲ್ ಗೋಡಬೋಲೆ, ಉಪಾಧ್ಯಕ್ಷ ಸಚಿನ್ ಗಿರಿ, ರಾಹುಲ್ ಖಂದಾರೆ, ಸುಭಾಷ್ ಲಾಧಾ, ಶಕ್ತಿಕಾಂತ್ ಭಾವಿದೊಡ್ಡಿ, ಗೌತಮ್ ದೊಡ್ಡಿ, ನಿಲೇಶ್ ಮಲಕೇರಿ ಹಾಗೂ ರವಿ ಭೂಸಂಡೆ ಸೇರಿದಂತೆ ಇತರರು ಇದ್ದರು.







