ಬೀದರ್ | ಮನೆಯಿಂದ ಹೊರಗಡೆ ಹೋಗಿದ್ದ ಯುವತಿ ನಾಪತ್ತೆ

ಆರುತಿ
ಬೀದರ್ : ನಗರದ ಭೀಮನಗರ ನಿವಾಸಿಯಾದ ಆರುತಿ (28) ಎಂಬ ಯುವತಿ ಕಾಣೆಯಾಗಿದ್ದು, ಅವರ ಮಾಹಿತಿ ಸಿಕ್ಕಲ್ಲಿ ತಿಳಿಸಬೇಕು ಎಂದು ಬೀದರ್ ಉಪನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಆರುತಿ ಅವರು ಜ.24 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿದ್ದು, ಅವರು 5 ಅಡಿ ಎತ್ತರವಾಗಿದ್ದು, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕಪ್ಪು ಕೂದಲು, ಉದ್ದ ಮುಖ, ಅಗಲ ಹಣೆ ಉಳ್ಳವರಾಗಿದ್ದಾರೆ. ಕಾಣೆಯಾದ ಸಮಯದಲ್ಲಿ ಮೈಮೇಲೆ ಚಾಕಲೇಟ್ ಕಲರ್ ಚೆಕ್ಸ್ ಚೂಡಿದಾರ, ಸಲವಾರ ಮತ್ತು ಟಾಪ್ ಧರಿಸಿರುವ ಇವರು ಕನ್ನಡ, ಹಿಂದಿ, ಮರಾಠಿ ಭಾಷೆಯಲ್ಲಿ ಮಾತನಾಡುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಕಾಣೆಯಾದ ಮಹಿಳೆ ಬಗ್ಗೆ ಸುಳಿವು ಅಥವಾ ಮಾಹಿತಿ ಸಿಕ್ಕಲ್ಲಿ ಬೀದರ್ ನಗರ ಪೊಲೀಸ್ ಠಾಣೆಯ ಪಿ ಎಸ್ ಐ ಮೊಬೈಲ್ ಸಂಖ್ಯೆ: 94808 03445 ಗೆ ಸಂಪರ್ಕಿಸುವಂತೆ ಕೋರಲಾಗಿದೆ.
Next Story







