ಬೀದರ್ | ವಚನ ಸಾಹಿತ್ಯ ರಕ್ಷಣೆಯಲ್ಲಿ ಅಕ್ಕ ನಾಗಮ್ಮನ ಪಾತ್ರ ಬಹುದೊಡ್ಡದು : ಡಾ.ಬಸವಲಿಂಗ ಪಟ್ಟದ್ದೇವರು

ಬೀದರ್ : ವಚನ ಸಾಹಿತ್ಯ ರಕ್ಷಣೆಯಲ್ಲಿ ಅಕ್ಕ ನಾಗಮ್ಮನ ಪಾತ್ರ ಬಹುದೊಡ್ಡದಾಗಿದೆ ಎಂದು ಡಾ.ಬಸವಲಿಂಗ ಪಟ್ಟದ್ದೇವರು ಅವರು ಹೇಳಿದರು.
ಇಂದು ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಬಸವ ಪಂಚಮಿ ಹಾಗೂ ಅಕ್ಕ ನಾಗಮ್ಮನವರ ಜಯಂತಿ ನಿಮಿತ್ಯ ಶ್ರೀ ಮಠದ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಹಬ್ಬ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಅವರು, ವಚನ ಸಾಹಿತ್ಯ ರಕ್ಷಣೆಯಲ್ಲಿ ಅಕ್ಕನಾಗಮ್ಮನ ಪಾತ್ರ ಬಹುದೊಡ್ಡದಾಗಿದೆ. ಕಲ್ಯಾಣ ಕ್ರಾಂತಿಯ ನಂತರ ಕಲ್ಯಾಣದಿಂದ ಉಳವಿವರೆಗೆ ವಚನಗಳನ್ನು ಉಳಿಸಿ, ರಕ್ಷಿಸಿದ ವಚನ ಮೂರ್ತಿ ಎಂದರೆ ಅಕ್ಕ ನಾಗಮ್ಮ ತಾಯಿಯಾಗಿದ್ದಾರೆ. ಬಸವಣ್ಣನವರ ವ್ಯಕ್ತಿತ್ವ ರೂಪಗೊಳ್ಳಲು ಅಕ್ಕ ನಾಗಮ್ಮ ಅವರದ್ದು ಬಹುದೊಡ್ಡ ಪಾತ್ರವಿದೆ. ಬಸವಣ್ಣನವರ ಬಾಲ್ಯದಿಂದ ಕೊನೆಯವರೆಗೂ ಅವರ ಜೊತೆಗಿದ್ದು ಅವರ ಹೆಗಲಿಗೆ ಹೆಗಲು ಕೊಟ್ಟು ಚಳುವಳಿ ಮುನ್ನಡೆಸಲು ಅವಿರತವಾಗಿ ಶ್ರಮಿಸಿದರು ಎಂದು ತಿಳಿಸಿದರು.
ಗುರುಬಸವ ಪಟ್ಟದ್ದೇವರು ಮಾತನಾಡಿದರು.
ಈ ಸಂದರ್ಭದಲ್ಲಿ ಶರಣೆ ಮನಿಷಾ, ಶರಣ ಸಂಗಮೇಶ್ ವಾಲೆ, ಶರಣೆ ಮಲ್ಲಮ್ಮ ನಾಗನಕೇರೆ, ಮಲ್ಲಮ್ಮ ಆರ್.ಪಾಟೀಲ್, ಶಿವಾನಂದ್ ಹೈಬತಪುರೆ, ಮಹಾನಂದಾ ಮಹಾಶೆಟ್ಟೆ, ನವಲಿಂಗ್ ಪಾಟೀಲ್ ಹಾಗೂ ಶ್ರೀದೇವಿ ಶಾಂತಯ್ಯ ಸ್ವಾಮಿ ಸೇರಿದಂತೆ ಅಕ್ಕನ ಬಳಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





