ಬೀದರ್ | ಎಲ್ಲಾ ರೈತರಿಗೆ ನಮ್ಮ ಹೊಲ ನಮ್ಮ ದಾರಿ ಯೋಜನೆಯ ಅನುಕೂಲವಾಗಬೇಕು : ಸಿದ್ರಾಮಯ್ಯಾ ಸ್ವಾಮಿ

ಬೀದರ್ : ನಮ್ಮ ಹೋಲ ನಮ್ಮ ದಾರಿ ಯೋಜನೆಯು ಎಲ್ಲಾ ರೈತರಿಗೆ ಅನುಕೂಲವಾಗಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಯ್ಯಾ ಸ್ವಾಮಿ ಅವರು ತಿಳಿಸಿದರು.
ಇಂದು ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಜಿಲ್ಲೆಯ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಿದ್ದ ಸಿರಿ ಎಥೇನಾಲ್ ಮತ್ತು ಪವರ್ ಚಿಂಚೋಳಿ ಸಂಸ್ಥೆಯಿಂದ ರೈತರೊಂದಿಗೆ ಒಪ್ಪಂದದ ಆಧಾರದ ಮೇಲೆ ಮೆಕ್ಕೆಜೋಳ ಬೆಳೆಯಲು ಪ್ರೋತ್ಸಾಹಿಸಿರುವುದರಿಂದ ಜಿಲ್ಲೆಯ ರೈತರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೃಷಿ ಇಲಾಖೆಯಿಂದ ಸಿರಿಧಾನ್ಯ ಬೆಳೆಯುವ ರೈತರಿಗೆ ಸರ್ಕಾರವು ಪ್ರತಿ ಹೆಕ್ಟರ್‌ಗೆ 10 ಸಾವಿರ ರೂ. ಸಹಾಯಧನ ನೀಡುತ್ತಿದ್ದು, ಕೃಷಿ ಇಲಾಖೆ, ತಾಲ್ಲೂಕು ಕೃಷಿಕ ಸಮಾಜದ ಘಟಕದಿಂದ ವ್ಯಾಪಕ ಪ್ರಚಾರ ಕೈಗೊಂಡು ರೈತರಿಗೆ ಸಿರಿಧಾನ್ಯ ಬೆಳೆಯುವಂತೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜನವಾಡದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಸುನಿಲಕುಮಾರ್, ಹಳದಕೇರಿ ಕೃಷಿ ಸಂಶೋಧನಾ ಸಂಸ್ಥೆಯ ಭವಾನಿ, ಪಶು ವೈದ್ಯಕಿಯ ಉಪ ನಿರ್ದೇಶಕ ನರಸಪ್ಪಾ, ಮೀನುಗಾರಿಗೆ ಇಲಾಖೆಯ ಜಾನಮ್ಮಾ, ಕ.ರಾ.ಸ.ಮ.ಮಂ ವ್ಯವಸ್ದಾಪಕ ಮಲ್ಲಿಕಾರ್ಜುನ್, ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ., ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಉಮಕಾಂತ ವಿ., ಖಜಾಂಚಿ ಗೋವಿಂದರೆಡ್ಡಿ, ಪ್ರಧಾನ ಕಾರ್ಯದರ್ಶಿ ಸಂಗಮೇಶ್ ವಾಲೆ, ವಿಶ್ವನಾಥ್ ಪಾಟಿಲ್ ಮಾಡಗೂಳ್ ಹಾಗೂ ಜಿಲ್ಲಾ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಹಾಗೂ ಸದಸ್ಯರು ಸೇರಿದಂತೆ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.







