ಬೀದರ್ | ಆರೆಸ್ಸೆಸ್ ನೋಂದಣಿಗೆ ಆಗ್ರಹಿಸಿ ಪ್ರಜಾಪ್ರಭುತ್ವ ಸಂರಕ್ಷಣ ಸಮಿತಿಯಿಂದ ಮನವಿ

ಬೀದರ್ : ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ನೋಂದಣಿ ಮಾಡಬೇಕು ಎಂದು ಆಗ್ರಹಿಸಿ, ಪ್ರಜಾಪ್ರಭುತ್ವ ಸಂರಕ್ಷಣ ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ.
ಭಾಲ್ಕಿಯ ತಹಶೀಲ್ದಾರ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಸೋಮವಾರ ಸಲ್ಲಿಸಿದ ಮನವಿಯಲ್ಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ನೂರು ವರ್ಷ ಪೂರೈಸಿದೆ. ಸಂಘವನ್ನು ನೂರು ವರ್ಷಗಳಲ್ಲಿ ಮೂರು ಸಲ ನಿಷೇಧಿಸಲಾಗಿದೆ. ಇವಾಗಲೂ ಕೂಡ ಈ ಸಂಘಟನೆ ನೋಂದಣಿಯಾಗಲಿಲ್ಲ. ಇದು ಕಾನೂನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಆರೋಪಿಸಲಾಗಿದೆ.
ಆರ್‌ಎಸ್‌ಎಸ್ ನ ನೋಂದಣಿ ಯಾಕೆ ಆಗಿಲ್ಲ? ಈ ಸಂಘಟನೆಯ ಆದಾಯದ ಮೂಲ ಯಾವುದು? ಎನ್ನುವುದು ಸೇರಿದಂತೆ ಕೆಲವು ವಿಚಾರಗಳ ಬಗ್ಗೆ ರಾಜ್ಯದ ಗೃಹ ಸಚಿವ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ಪತ್ರ ಬರೆದು ಸುಮಾರು ಪ್ರಶ್ನೆಗಳು ಕೇಳಿದ್ದಾರೆ. ಅದಕ್ಕೆ ಉತ್ತರಿಸುವ ಬದಲು ಪ್ರಿಯಾಂಕ್ ಖರ್ಗೆ ಅವರನ್ನೇ ನಿಂದಿಸುವುದು ಮಾಡಲಾಗುತ್ತಿದೆ. ದಲಿತರಿಗೆ ಏಕೆ ಬೇಕು ಆರ್‌ಎಸ್ಎಸ್ ಉಸಾಬರಿ ಎನ್ನುವ ಮಾತು ಜನಾದೇಷದಿಂದ ಆಯ್ಕೆಯಾದ ಸಂಸದರೊಬ್ಬರು ಆಡಿದ್ದಾರೆ. ಇದು ಖಂಡನಿಯ ಎಂದು ಆಕ್ರೋಶ ಹೊರ ಹಾಕಲಾಗಿದೆ.
ಭಾರತದ ಸರ್ಕಾರವೇ ನೋಂದಣಿ ಮಾಡಿಸದ ಹಾಗೂ ನೋಂದಣಿ ಮಾಡಿಸಿ ಕಾನೂನು ಬಾಹಿರ ಕೃತ್ಯಗಳು ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಬಹಳಷ್ಟು ಸಂಘ-ಸಂಸ್ಥೆ, ಪಕ್ಷಗಳು, ಕೆಲವು ಕಂಪನಿಗಳು ನಿಷೇಧ ಮಾಡಿದರೆ, ಇನ್ನೂ ಕೆಲವನ್ನು ಕಪ್ಪುಪಟ್ಟಿಗೆ ಸೇರಿಸಿದೆ. ದೇಶದಲ್ಲಿ ಕಾನೂನು ಎಂಬುದು ಸರ್ವೋಚ್ಚವಾಗಿದ್ದು, ಯಾವುದೇ ಸಂಘ-ಸಂಸ್ಥೆ ಅಥವಾ ವ್ಯಕ್ತಿಗತ ಏನೇ ಇದ್ದರು ಅದು ಕಾನೂನಿನ ಚೌಕಟ್ಟಿನಲ್ಲಿ ಮಾಡಬೇಕು ಎಂದು ಸ್ವತಃ ಸರ್ಕಾರವೇ ಹೇಳುತ್ತದೆ. ಇದು ಆರ್‌ಎಸ್ಎಸ್‌ಗೂ ಕೂಡ ಅನ್ವಯವಾಗುತ್ತದೆ ಎಂದು ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಸಂರಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಗಗನ್ ಫುಲೆ, ಶ್ರೀಮಂತ್ ಚಿಕಲಚೆಂದಾ, ಆದೇಶ್ ಭಾವಿಕಟ್ಟಿ, ಲೋಕೇಶ್ ಕಾಂಬ್ಳೆ, ಶ್ರೀನಿವಾಸ್ ಬ್ಯಾಲಹಳ್ಳಿ ಹಾಗೂ ಜೈವರ್ಧನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






