ಬೀದರ್ | ಬಸವಕಲ್ಯಾಣ ತಹಶೀಲ್ ಕಚೇರಿಯಲ್ಲಿನ ಭ್ರಷ್ಟಾಚಾರ ತಡೆಗಟ್ಟಲು ಮನವಿ

ಬೀದರ್ : ಜಿಲ್ಲೆಯ ಬಸವಕಲ್ಯಾಣದ ತಹಶೀಲ್ ಕಚೇರಿಯಲ್ಲಿನ ಭ್ರಷ್ಟಾಚಾರ ತಡೆಗಟ್ಟಬೇಕು ಎಂದು ಬಹುಜನ ಸಮಾಜ ಪಕ್ಷವು ಮನವಿ ಸಲ್ಲಿಸಿದೆ.
ಬಸವಕಲ್ಯಾಣ ಉಪವಿಭಾಗದ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬಸವಕಲ್ಯಾಣ ತಾಲೂಕಿನ ತಹಶೀಲ್ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇದರಿಂದ ಸಾರ್ವಜನಿಕ ಹಾಗೂ ರೈತರು ಕೆಂಗಟ್ಟಿ ಹೋಗಿದ್ದಾರೆ.ಇದಕ್ಕೆ ತಾಲೂಕು ಆಡಳಿತ ಹಾಗೂ ಶಾಸಕರ ಕಾರ್ಯ ವೈಫಲ್ಯವೇ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.
ಇಲ್ಲಿನ ಭ್ರಷ್ಟಾಚಾರ ತಡೆಗಟ್ಟುವುದು ತೀರ ಜರೂರಿ ಕೆಲಸವಾಗಿದ್ದು, ಇದರ ಮೂಲ ಬೇರು ಪತ್ತೆ ಹಚ್ಚಬೇಕು. ಇದೇ ರೀತಿ ಭ್ರಷ್ಟಾಚಾರ ಮುಂದುವರೆಯುತ್ತಾ ಹೋದರೆ ತಾಲೂಕು ಆಡಳಿತದಲ್ಲಿ ಭ್ರಷ್ಟಾ ಅಧಿಕಾರಿಗಳ ಹಾವಳಿ ಹೆಚ್ಚಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.
ಒಂದು ವೇಳೆ ಇದೇ ರೀತಿ ಭ್ರಷ್ಟಾಚಾರ ಮುಂದುವರೆಯುತ್ತಾ ಹೋದರೆ ನಾವು ತಾಲೂಕು ಆಡಳಿತ ಕಚೇರಿ ಎದುರು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬಿಎಸ್ಪಿ ತಾಲೂಕು ಅಧ್ಯಕ್ಷ ಶಂಕರ್ ಫುಲೆ, ಉಪಾಧ್ಯಕ್ಷ ರಮೇಶ್ ರಾಠೋಡ್, ಪ್ರಧಾನ ಕಾರ್ಯದರ್ಶಿ ರವಿ ಉದಾತೆ, ಸಂಯೋಜಕರಾದ ದತ್ತು ಸುಂಠಾಣೆ, ಮಕ್ಬುಲ್ ಸಾಬ್, ಮಹಾದೇವ್ ಗಾಯಕವಾಡ್, ಸಚಿನ್ ಕಾಂಬಳೆ ಹಾಗೂ ಚಂದ್ರಕಾಂತ್ ಲಂಗಡೆ ಸೇರಿದಂತೆ ಇತರರು ಇದ್ದರು.





