ಬೀದರ್ | ಗಡಿರಾಯಪಳ್ಳಿ ಗ್ರಾಮದಲ್ಲಿನ ಅನಧಿಕೃತ ಮೂರ್ತಿಗಳನ್ನು ತೆರವುಗೊಳಿಸಲು ಮನವಿ

ಬೀದರ್ : ಹುಲಸುರ್ ತಾಲ್ಲೂಕಿನ ಗಡಿರಾಯಪಳ್ಳಿ ಗ್ರಾಮದಲ್ಲಿನ ಅನಧಿಕೃತ ಮೂರ್ತಿಗಳು ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಇಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಗಡಿರಾಯಪಳ್ಳಿ ಗ್ರಾಮದಲ್ಲಿ ಶಿವಾಜಿ, ಸಂಗೊಳ್ಳಿ ರಾಯಣ್ಣ ಹಾಗೂ ಸಿದ್ದಲಿಂಗೇಶ್ವರ್ ಸೇರಿದಂತೆ ಇನ್ನಿತರ ಮಹಾನ್ ಪುರುಷರ ಮೂರ್ತಿಗಳು ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿದೆ. ತಕ್ಷಣವೇ ಈ ಅನಧಿಕೃತವಾಗಿ ನಿರ್ಮಾಣ ಮಾಡಲಾದ ಮೂರ್ತಿಗಳನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಗೌತಮ್ ಸೇಡೋಳ್, ಲೋಕೇಶ್ ಕಾಂಬಳೆ, ಇಸ್ಮಾಯಿಲ್ ಶಿಂಧೆ, ವಿಶ್ವನಾಥ್ ಗಾಯಕವಾಡ್, ಜ್ಞಾನೇಶ್ವರ್ ಗಾಯಕವಾಡ್, ಭೀಮಶಾ ಮೆಲಕೇರಿ, ವಿದ್ಯಾಸಾಗರ್ ಘಾಟಬೋರಳ್ ಉಪಸ್ಥಿತರಿದ್ದರು.
Next Story