ಬೀದರ್ | ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ

ಸಾಂದರ್ಭಿಕ ಚಿತ್ರ
ಬೀದರ್ : ನಗರದ ಖಾನಾಪೂರ ಮತ್ತು ಹಲಬರ್ಗಾ ರೈಲು ನಿಲ್ದಾಣಗಳ ಮಧ್ಯ ರೈಲು ಹಳಿಗಳ ಪಕ್ಕದಲ್ಲಿ ಜು.21 ರಂದು ಒರ್ವ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ವಾರಸುದಾರರು ಯಾರಾದರೂ ಇದ್ದಲ್ಲಿ ತಿಳಿಸಬೇಕು ಎಂದು ಬೀದರ್ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಮೃತ ವ್ಯಕ್ತಿಯು ಸುಮಾರು 40 ವರ್ಷದವನಾಗಿದ್ದು, 5.4 ಅಡಿ ಎತ್ತರ ಇದ್ದು, ತಳ್ಳನೆ ಮೈಕಟ್ಟು, ಗೋಲು ಮುಖ, ಅಗಲವಾದ ಹಣೆ, ಸಣ್ಣ ಕಣ್ಣುಗಳು, ಮುಖದ ಮೇಲೆ ಚಿಕ್ಕ ಮೀಸೆ ಮತ್ತು ಗಡ್ಡ, ಗೋದಿ ಮೈಬಣ್ಣ, ತಲೆಯಲ್ಲಿ ಬಿಳಿ ಮಿಶ್ರೀತ ಕಪ್ಪು ಕೂದಲು ಹೊಂದಿದ್ದಾನೆ. ಈತನು ಒಂದು ನೀಲಿ ಬಣ್ಣದ ಫುಲ್ ಶರ್ಟ್ ಮತ್ತು ಒಂದು ಕ್ರೀಮ್ ಕಲರ್ ಪ್ಯಾಂಟ್ ಧರಿಸಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬೀದರ್ ರೈಲ್ವೆ ನಿಲ್ದಾಣದ ಡಿವೈಎಸ್ಎಸ್ ಕುಂದನಕುಮಾರ್ ಅವರ ಲಿಖಿತ ದೂರಿನ ಅನ್ವಯ ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಅಪರಿಚಿತ ಮೃತನ ವಾರಸುದಾರರ ಪತ್ತೆ ಬಗ್ಗೆ ಸುಳಿವು ಸಿಕ್ಕರೆ ಬೀದರ್ ನ ಪೊಲೀಸ್ ಉಪ ನಿರೀಕ್ಷಕರು ರೈಲ್ವೆ ಪೊಲೀಸ್ ಠಾಣೆ ಅಥವಾ ದೂರವಾಣಿ ಸಂಖ್ಯೆ: 08482-226389, ಮೊಬೈಲ್ ನಂ. 94808 02133, 74830 95508, 70193 84645 ಗಳಿಗೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.





