ಬೀದರ್ | ಐಟಿಐ ಪ್ರವೇಶಾತಿಗೆ ಅರ್ಜಿ ಆಹ್ವಾನ

ಬೀದರ್ : ಜಿಲ್ಲೆಯ ಸರಕಾರಿ, ಅನುದಾನಿತ ಐಟಿಐ ಕಾಲೇಜುಗಳ ವಿವಿಧ ವೃತ್ತಿಗಳಗೆ 2025-26ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕಾಗಿ ಆನ್‌ಲೈನ್ ಮುಖಾಂತರ ಅರ್ಜಿ ಅಹ್ವಾನಿಸಲಾಗಿದೆ ಎಂದು ಬೀದರ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಕ ಮತ್ತು ಮೀಸಲಾತಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. 10ನೇ ಪಾಸಾಗಿ 14 ವರ್ಷ ಮೇಲ್ಪಟ್ಟ ಹಾಗೂ ಎಸೆಸೆಲ್ಸಿ ಅನುತ್ತೀರ್ಣರಾಗಿ 8ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಬೆಸುಗೆಗಾರ ವೃತ್ತಿಗೆ (ವೆಲ್ಡರ್ ಟ್ರೇಡ್) ವಿದ್ಯಾರ್ಥಿಗಳು ಮೇ. 9 ರಿಂದ 28 ರವರೆಗೆ ಆನ್‌ಲೈನ್ ವೆಬ್‌ಸೈಟ್ http://cite.karnataka.gov.in ನಲ್ಲಿ ಅರ್ಜಿ ಸಲ್ಲಿಸಬಹುದು. ಇಲ್ಲದಿದ್ದರೆ ಸಮೀಪದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಹೆಲ್ಪ್ ಡೆಸ್ಕ್ ಗಳಲ್ಲಿ ಮಾಹಿತಿ ಪಡೆದು ಅಲ್ಲಿಯೇ ಅರ್ಜಿ ಹಾಕಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಬೀದರ್ (99010 97655), (7259854729), ಹುಮನಾಬಾದ್ (94490 41472), ಔರಾದ್ (97403 14795), ಬಸವಕಲ್ಯಾಣ (99458 34467), ಭಾಲ್ಕಿ (91104 12264) ಹಾಗೂ ಕಮಲನಗರ (94483 49888) ಈ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.