Bidar | ಯಂಗ್ ಇಂಡಿಯಾ ಸ್ಪೋರ್ಟ್ಸ್ ಫೆಲೋಶಿಪ್‌ಗೆ ಅರ್ಜಿ ಆಹ್ವಾನ

ಬೀದರ್: 2036ರ ಒಲಿಂಪಿಕ್ಸ್‌ಗೆ ಕ್ರೀಡಾಪಟುಗಳು ಮತ್ತು ಕ್ರೀಡಾ ವೃತ್ತಿಪರರನ್ನು ಸಜ್ಜುಗೊಳಿಸುವ ಉದ್ದೇಶದಿಂದ ತೆಲಂಗಾಣ ಸರ್ಕಾರದ ಯಂಗ್ ಇಂಡಿಯಾ ಫಿಜಿಕಲ್ ಎಜುಕೇಷನ್ ಅಂಡ್ ಸ್ಪೋರ್ಟ್ಸ್ ಯೂನಿವರ್ಸಿಟಿ (YIPESU) ಭಾರತದಲ್ಲೇ ಮೊದಲ ಬಾರಿಗೆ 11 ತಿಂಗಳ ವಸತಿ ಸಹಿತ ‘ಯಂಗ್ ಇಂಡಿಯಾ ಸ್ಪೋರ್ಟ್ಸ್ ಫೆಲೋಶಿಪ್’ ಕಾರ್ಯಕ್ರಮವನ್ನು 2026ರ ಅಕ್ಟೋಬರ್‌ನಿಂದ ಆರಂಭಿಸುತ್ತಿದೆ ಎಂದು ಬೀದರ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ್ ತಿಳಿಸಿದ್ದಾರೆ.
ಪ್ರಕಟಣೆಯ ಪ್ರಕಾರ, 21ರಿಂದ 28 ವರ್ಷದೊಳಗಿನ ಪದವೀಧರರು ಹಾಗೂ ಕ್ರೀಡಾ ಹಿನ್ನೆಲೆಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಒಟ್ಟು 30 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಅವರಲ್ಲಿ 20 ಮಂದಿಗೆ ವಿದ್ಯಾರ್ಥಿವೇತನ (ಸ್ಕಾಲರ್‌ಶಿಪ್) ಸೌಲಭ್ಯ ಕಲ್ಪಿಸಲಾಗುತ್ತದೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 15ರೊಳಗೆ yipesu.telagana.gov.in ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




