ಬೀದರ್ | ಡಾ.ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ಕಾರ್ಯಕ್ರಮ ಆಯೋಜನಾ ಸಮಿತಿಗೆ ಪದಾಧಿಕಾರಿಗಳ ನೇಮಕ

ಬೀದರ್ : ಡಿ.6 ರಂದು ಆಯೋಜಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ಕಾರ್ಯಕ್ರಮದ ಆಯೋಜನಾ ಸಮಿತಿಗೆ ಇಂದು ಪದಾಧಿಕಾರಿಗಳ ನೇಮಿಸಲಾಯಿತು ಎಂದು ಶಿವಕುಮಾರ್ ನಿಲಿಕಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಮುಂಜಾನೆ 11 ಗಂಟೆಗೆ ನಗರದ ಶಾಹಗಂಜ್ ನ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ವಿವಿಧ ದಲಿತ ಸಂಘಟನೆಗಳ ಮುಖಂಡರು, ಹೋರಾಟಗಾರರು, ಚಿಂತಕರು ಮತ್ತು ಡಾ.ಅಂಬೇಡ್ಕರ್ ಅವರ ಅನುಯಾಯಿಗಳ ನೇತೃತ್ವದಲ್ಲಿ, ಸಮಾಜ ಸೇವಕ ಈಶ್ವರ್ ಕನ್ನೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು ಎಂದು ಮಾಹಿತಿ ನೀಡಿದ್ದಾರೆ.
ಅಧ್ಯಕ್ಷರಾಗಿ ರಮೇಶ ಡಾಕುಳಗಿ, ಕಾರ್ಯಾಧ್ಯಕ್ಷರಾಗಿ ಮಹೇಶ್ ಗೋರನಾಳಕರ್, ಗೌರವಾಧ್ಯಕ್ಷರಾಗಿ ಪ್ರಕಾಶ್ ಮಾಳಗೆ, ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ್ ನಿಲಿಕಟ್ಟಿ, ಕಾರ್ಯದರ್ಶಿಗಳಾಗಿ ವಿನಯಕುಮಾರ್ ಮಾಳಗೆ ಹಾಗೂ ಸಾಯಿ ಶಿಂದೆ ಅವರನ್ನು ನೇಮಕ ಮಾಡಲಾಗಿದೆ.
ಸಲಹೆಗಾರರಾಗಿ ಅನೀಲಕುಮಾರ ಬೆಲ್ದಾರ, ಮಾರುತಿ ಬೌಧ್ದೆ, ಬಾಬುರಾವ ಪಾಸ್ವಾನ, ಬಕ್ಕಪ್ಪಾ ದಂಡಿನ, ಅಶೋಕ ಮಾಳಗೆ, ಶ್ರೀಪತರಾವ ದೀನೆ, ಡಾ.ಕಾಶಿನಾಥ ಚೆಲ್ವಾ, ವಿಠಲದಾಸ ಪ್ಯಾಗೆ, ಅಂಬಾದಾಸ ಗಾಯಕವಾಡ, ಈಶ್ವರಪ್ಪಾ ಗಾಯಕವಾಡ ಹಾಗೂ ದಶರಥ ಗುರು ಅವರನ್ನು ನೇಮಿಸಲಾಗಿದೆ.
ಉಪಾಧ್ಯಕ್ಷರಾಗಿ ಮಾರುತಿ ಕಂಟಿ, ಬಾಬುರಾವ್ ಮಿಠಾರೆ, ಸುನೀಲ್ ಸಂಗಮ್, ಜಗನಾಥ ಗಾಯಕವಾಡ, ರಮೇಶ ಮಂದಕನಳ್ಳಿ, ರಮೇಶ ಪಾಸ್ವಾನ, ಮೊಗಲಪ್ಪಾ ಮಾಳಗೆ, ಸಂದೀಪ ಕಾಂಟೆ, ಪ್ರದೀಪ ನಾಟೆಕರ್, ಪ್ರಸನ್ನ ಡಾಂಗೆ, ಮುಕೇಶ ರಾಯ್, ಶಾಲಿವಾನ ಬಡಿಗೆರ್, ಪುಟ್ಟರಾಜ ದೀನೆ, ನಾಗೇಶ ಸಾಗರ,ವಿನೋದ ಅಪ್ಪೆ, ಅವಿನಾಶ್ ದೀನೆ, ಸಂಜುಕುಮಾರ ಸಾಗರ, ನರಸಿಂಗ ಸಾಮ್ರಾಟ, ಸತೀಶ್ ಲಕ್ಕಿ, ಅಂಬೇಡ್ಕರ್ ಸಾಗರ, ಅರುಣ ಪಟೇಲ್, ಅಜಯ ದೀನೆ, ಪವನ ಮಿಠಾರೆ, ರಾಹುಲ್ ಡಾಂಗೆ, ಪ್ರಕಾಶ ರಾವಣ ಅವರನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಡಿ.6 ರಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ನಿಮಿತ್ತ ಬೀದರ್ ನ ಅಂಬೇಡ್ಕರ್ ವೃತ್ತದಲ್ಲಿ ಮುಂಜಾನೆ 9 ಗಂಟೆಗೆ ಜಿಲ್ಲಾಡಳಿತ ಮತ್ತು ಮಹಾಪರಿನಿರ್ವಾಣ ಕಾರ್ಯಕ್ರಮ ಆಯೋಜನಾ ಸಮಿತಿ ವತಿಯಿಂದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಲಾಗುವುದು. ಮುಂಜಾನೆ 11 ಗಂಟೆಗೆ ಅಂಬೇಡ್ಕರ್ ವೃತ್ತದ ಎದುರಿಗೆ ಭೀಮ ಗೀತೆಗಳ ಗಾಯನ ಮತ್ತು ನುಡಿನಮನ ಕಾರ್ಯಕ್ರಮ ನಡೆಯುತ್ತದೆ. ಸಂಜೆ 5 ಗಂಟೆಗೆ ಪ್ರತಿವರ್ಷದಂತೆ ನಡೆಯುವ ಬೃಹತ್ ಬಹಿರಂಗ ಸಭೆಯಲ್ಲಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಚಿಂತಕರನ್ನು ಅತಿಥಿಗಳಾಗಿ ಆಹ್ವಾನಿಸಲು ತಿರ್ಮಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.







