ಬೀದರ್ | ಭಾಲ್ಕಿ ರೈಲ್ವೆ ನಿಲ್ದಾಣದಲ್ಲಿ ತಿರುಪತಿ-ಔರಂಗಬಾದ್ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಅನುಮೋದನೆ

ಸಾಂದರ್ಭಿಕ ಚಿತ್ರ | PC : freepik
ಬೀದರ್ : ರೈಲು ಸಂಖ್ಯೆ 17621/17622 ತಿರುಪತಿ–ಔರಂಗಬಾದ್ ಎಕ್ಸ್ಪ್ರೆಸ್ ರೈಲು ಇದೀಗ ಭಾಲ್ಕಿ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ.
ಈ ರೈಲ್ವೆಯು ಪ್ರಯೋಗಾತ್ಮಕವಾಗಿ ಅನುಮೋದನೆಯಾಗಿದ್ದು, ಈ ರೈಲ್ವೆಯು ತಾತ್ಕಾಲಿಕವಾಗಿ ಭಾಲ್ಕಿ ನಿಲ್ದಾಣದಲ್ಲಿ ನಿಲ್ಲಲಿದೆ. ಒಂದು ವೇಳೆ ಭಾಲ್ಕಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಈ ರೈಲಿನ ಮೂಲಕ ಪ್ರಯಾಣ ಬೆಳೆಸಿದರೆ ಈ ರೈಲು ನಿರಂತರವಾಗಿ ಭಾಲ್ಕಿಯಲ್ಲಿ ನಿಲುಗಡೆಯಾಗುವುದು ಮುಂದುವರೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ರೈಲು ನಿಲ್ದಾಣದಿಂದ ಭಾಲ್ಕಿ ಹಾಗೂ ಸುತ್ತಮುತ್ತಲಿನ ಭಾಗದ ಜನರಿಗೆ ತಿರುಪತಿ ಯಾತ್ರೆ ಮಾಡಲು ಅನುಕೂಲ ಕಲ್ಪಿಸಲಿದೆ.
Next Story





