ಬೀದರ್ | ಕಲೆ ಮನುಷ್ಯನನ್ನು ಎತ್ತರ ಸ್ಥಾನಕ್ಕೆ ಕೊಂಡೊಯ್ಯುತ್ತದೆ : ಪ್ರೊ.ಬಿ.ಜಿ.ಮೂಲಿಮನಿ

ಬೀದರ್ : ಕಲೆ ಮನುಷ್ಯನನ್ನು ಎತ್ತರದ ಸ್ಥಾನಕ್ಕೆ ಕೊಂಡ್ಯೊಯುತ್ತದೆ ಎಂದು ನಿವೃತ ಉಪಕುಲಪತಿ ಪ್ರೊ.ಬಿ.ಜಿ.ಮೂಲಿಮನಿ ಅವರು ನುಡಿದರು.
ನಗರದ ಕ ರಾ.ಶಿ ಸಂಸ್ಥೆಯ ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಬಿ.ಸಿ.ಎ ಹೊಸ ವಿದ್ಯಾರ್ಥಿಗಳ ಸ್ವಾಗತ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಬಿ.ಸಿ.ಎ ವಿದ್ಯಾರ್ಥಿಗಳು ಡೆವೆಲಪ್ ಮಾಡಿರುವ ಕೊಡ್‌ಯಾತ್ರಿ ಎ ಕಮ್ಯುನಿಟಿ ದಟ್ಸ್ ಕನೆಕ್ಟ್ಸಆಂಡ್ ಕ್ರಿಯೆಟ್ಸ ಅನ್ನು ಡಿಜಿಟಲ್ ಅನಾವರಣಗೊಳಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕದ ಭಾಗದಲ್ಲೇ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಬೀದರ್‌ನ ಕ.ರಾ.ಶಿ ಸಂಸ್ಥೆಯ ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯವನ್ನು ಆಯ್ಕೆ ಮಾಡಿ ಒಳ್ಳೆಯ ನಿರ್ಧಾರ ಮಾಡಿದ್ದಿರಿ ಎಂದು ಹೇಳಿದ ಅವರು, ದೇಶದಲ್ಲಿ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈ ಮಹಾವಿದ್ಯಾಲಯವೂ ಒಂದಾಗಿದೆ. ಇಲ್ಲಿ ಗುಣಮಟ್ಟದ ಶಿಕ್ಷಣವಿದ್ದು, ಇಲ್ಲಿ ಕಲಿತ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಹಾಗೂ ಸಂಶೋಧನೆಗಳು ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸತೀಶ್ ಪಾಟೀಲ್, ನಿರ್ದೇಶಕ ವಿಜಯಕುಮಾರ್ ಗುನ್ನಳ್ಳಿ, ಪ್ರಾಚಾರ್ಯ ಪ್ರೋ. ಮಲ್ಲಿಕಾರ್ಜುನ್ ಹಂಗರಗೆ, ಉಪ ಪ್ರಾಚಾರ್ಯ ಸೋಮನಾಥ್ ಬಿರಾದಾರ್, ಗಣಕಯಂತ್ರ ವಿಜ್ಞಾನ ವಿಭಾಗದ ಮುಖ್ಯಸ್ಥ ಶ್ರೀಕಾಂತ್ ದೊಡ್ಡಮನಿ, ಗಣಕಯಂತ್ರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಬಿ. ವಿ. ರವಿಚಂದ್ರ ಹಾಗೂ ಕರ್ನಾಟಕ ಸಂಜೆ ಕಾಲೇಜಿನ ಪ್ರಾಚಾರ್ಯ ಅಶೋಕ್ ಹುಡೆದ್ ಸೇರಿದಂತೆ ಇನ್ನಿತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







