Bidar | ಮಾಂಜಾ ಧಾರಾ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತ್ಯು

ಹುಮನಾಬಾದ್ : ಮಾಂಜಾ ಧಾರಾ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ 65 ಮೇಲೆ ನಡೆದಿದೆ.
ಮೃತರನ್ನು ಬಂಬುಳಗಿ ಗ್ರಾಮದ ಸಂಜೀವಕುಮಾರ್ (48) ಎಂದು ಗುರುತಿಸಲಾಗಿದೆ.
ಸಂಜೀವಕುಮಾರ್ ಅವರು ತಮ್ಮ ಗ್ರಾಮದಿಂದ ಹುಮನಾಬಾದ್ ಗೆ ತೆರಳುವಾಗ ತಾಳಮಡಗಿ ಗ್ರಾಮದ ಹತ್ತಿರ ಗಾಳಿಪಟ ಹಾರಿಸುವ ಮಾಂಜಾ ಧಾರಾ ಅವರ ಕುತ್ತಿಗೆಗೆ ಸಿಲುಕಿ ಸ್ಥಳದಲ್ಲಿಯೇ ತುಂಬಾ ರಕ್ತ ಸ್ರಾವವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮನ್ನಾಖೇಳಿ ಪಿಎಸ್ಐ ಮಹೇಂದ್ರ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಾಳಿಪಟ ಹಾರಿಸುವಾಗ ಮಾಂಜಾ ಧಾರಾ ಬಳಸಬಾರದು ಹಾಗೆಯೇ ಅದನ್ನು ಮಾರಾಟ ಕೂಡ ಮಾಡಬಾರದು ಎಂದು ಜಾಗೃತಿ ಮೂಡಿಸಲಾಗಿತ್ತು. ಆದರೆ ಇಂತಹ ಘಟನೆ ನಡೆದದ್ದು ಬೇಸರದ ಸಂಗತಿಯಾಗಿದೆ. ಇದರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಚಿಟಗುಪ್ಪಾ ತಹಶೀಲ್ದಾರ್ ಅವರು ತಿಳಿಸಿದ್ದಾರೆ.





