Bidar | 5ನೇ ಬಾರಿಗೆ ಗೆಲುವು ಸಾಧಿಸಿದ ಶಶೀಲ್ ಜಿ.ನಮೋಶಿಗೆ ಬಿಜೆಪಿ ವತಿಯಿಂದ ಅಭಿನಂದನೆ

ಬೀದರ್: ವಿಧಾನ ಪರಿಷತ್ ಚುನಾವಣೆಯಲ್ಲಿ ಸತತ ಐದನೇ ಬಾರಿಗೆ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರನ್ನು ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನಗರದ ಬಿಜೆಪಿ ಕಚೇರಿಯಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ಶಾಸಕ ಶರಣು ಸಲಗರ, ಕೇಂದ್ರದ ಮಾಜಿ ಸಚಿವ ಭಗವಂತ್ ಖೂಬಾ, ವಿಧಾನ ಪರಿಷತ್ತಿನ ಮಾಜಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ, ಪ್ರಧಾನ ಕಾರ್ಯದರ್ಶಿ ವೀರಪ್ಪ ಔರಾದೆ, ಕಿರಣ್ ಪಾಟೀಲ್, ರಾಜಶೇಖರ್ ನಾಗಮೂರ್ತಿ, ಗುರುನಾಥ್ ಜಾಂತೇಕರ್, ಬಾಬು ವಾಲಿ, ಅಶೋಕಕುಮಾರ್ ಕರಂಜಿ, ದೀಪಕ್ ಗಾದಗಿ, ಗಣೇಶ್ ಭೋಸ್ಲೆ, ಕುಶಾಲ್ ಪಾಟೀಲ್, ವೀರಣ್ಣ ಕಾರ್ಬರಿ, ಲುಂಬಿನಿ ಗೌತಮ್ ಹಾಗೂ ವಿಜಯಲಕ್ಷ್ಮಿ ಕೌಟಿಗೆ ಸೇರಿದಂತೆ ಪಕ್ಷದ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
Next Story




