ಬೀದರ್ | ಫರೀದ್ ಉಲ್ಲ್ ಖಾನ್ ಅವರ ನೇತೃತ್ವದಲ್ಲಿ ರಕ್ತದಾನ ಶಿಬಿರ

ಬೀದರ್ : ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಫರೀದ್ ಉಲ್ಲ್ ಖಾನ್ ಅವರ ನೇತೃತ್ವದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಆಪರೇಷನ್ ಸಿಂಧೂರ್ ಯಶಸ್ವಿ ಮಾಡಿದ ನಮ್ಮ ಸೈನಿಕರಿಗೆ ಧನ್ಯವಾದ ಅರ್ಪಣೆಗಾಗಿ ಮತ್ತು ಮಾಜಿ ಪ್ರಧಾನಿ ಉಕ್ಕಿನ ಮಹಿಳೆ ದಿವಂಗತ ಇಂದಿರಾ ಗಾಂಧಿ ಅವರಿಗೆ ನೆನೆದು 52ಕ್ಕೂ ಹೆಚ್ಚು ರಕ್ತದಾನಿಗಳು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಬೀದರ್ ದಕ್ಷಿಣ ಯುವ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ್ ಖಾನ್, ಜಿಲ್ಲಾ ಉಪಾಧ್ಯಕ್ಷರಾದ ರಾಗ್ನಿ ದಂಡೆ, ನೇಹಾ ಚಲ್ವ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಂ.ಡಿ.ಇಮ್ರಾನಖಾನ್, ಸಾಯಿಕುಮಾರ್ ಪಾಟೀಲ್, ಜುನೈದ್ ಅಕ್ರಮ, ಕೃಷ್ಣ ಮೇತ್ರೆ, ಸಚಿನ್ ಶೆಟ್ಕರ್, ಇಲ್ಯಾಸ್ ಪಟೇಲ್, ಅವೆಜ್ ಖಾನ್ ಹಾಗೂ ಆಶೀಫ್ ಸೇರಿದಂತೆ ಅನೇಕ ಯುವ ಮುಖಂಡರು ಭಾಗವಹಿಸಿದ್ದರು.
Next Story





