ಬೀದರ್ | ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಬೀದರ್ : ಮಾಂಜ್ರಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ ಎಂದು ಜನವಾಡಾ ಠಾಣೆ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬೀದರ್ ತಾಲೂಕಿನ ನೇಮತಾಬಾದ್ ಗ್ರಾಮದ ಜಮೀನಿನ ಸಮೀಪದ ಮಾಂಜ್ರಾ ನದಿಯಲ್ಲಿ 50ರಿಂದ 55ರ ಹರೆಯದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಇಲ್ಲಿವರೆಗೆ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.
ನೇಮತಾಬಾದ ಗ್ರಾಮದ ಉತ್ತಮ್ ಅವರ ದೂರಿನ ಮೇರೆಗೆ ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮೃತ ವ್ಯಕ್ತಿಯು 5.2 ಅಡಿ ಎತ್ತರವಿದ್ದು, ಬೋಳು ತಲೆ, ಮೈಮೇಲೆ ಒಂದು ಬಿಳಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಬನಿಯನ್ ಧರಿಸಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.
ಈ ಕುರಿತ ಮಾಹಿತಿಗಾಗಿ ಜನವಾಡಾ ಪೊಲೀಸ್ ಠಾಣೆ ಮೊಬೈಲ್ ಸಂಖ್ಯೆ: 94808 03450, ಬೀದರ್ ಗ್ರಾಮೀಣ ವಿಭಾಗದ ಸಿಪಿಐ ಅವರ ಮೊಬೈಲ್ ಸಂಖ್ಯೆ: 94808 03439, ಬೀದರ್ ಡಿಎಸ್‍ಪಿ ಮೊಬೈಲ್ ಸಂಖ್ಯೆ: 94808 03420 ಹಾಗೂ ಕಂಟ್ರೋಲ್ ರೂಮ್ ನಂಬರ್ ದೂರವಾಣಿ ಸಂಖ್ಯೆ: 08482-226700ಗೆ ಸಂಪರ್ಕಿಸುವಂತೆ ಕೋರಿದ್ದಾರೆ.





